ನವ ದೆಹಲಿ : ಕೋವಿಡ್ ರೂಪಾಂತರಿ ಸೋಂಕು ದೇಶದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್  ಮೋಹಕ  ನಟಿ ಹಾಗೂ ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೋಪ್ರಾ ಆತಂಕ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ತಮ್ಮ ಅಭಿಮಾನಿಗಳಿಗ ಹಾಗೂ ಭಾರತೀಯ ಜನೆಗೆ ಮನವಿ ಮಾಡಿಕೊಂಡಿರುವ ಪ್ರಿಯಾಂಕ, ಕೋವಿಡ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ, ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರತದಾದ್ಯಂತದ ಕೋವಿಡ್ 19 ಪರಿಸ್ಥಿತಿ ಗಂಭೀರವಾಗಿದೆ. ದೇಶದ ವಿವಿಧ ಭಾಗಗಳಿಂದ ಕೇಳಿಬರುತ್ತಿರುವ ಪರಿಸ್ಥಿತಿಗಳು ತುಂಬಾ ಭಯಾನಕವಾಗಿದೆ… ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ”ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಮಹೇಂದ್ರ ಸಿಂಗ್ ಧೋನಿ ತಂದೆ- ತಾಯಿಗೆ ಕೋವಿಡ್ ಸೋಂಕು ದೃಢ

ಇನ್ನು “ದಯವಿಟ್ಟು ಮನೆಯಲ್ಲೇ ಇರಿ… ಮನೆಯಲ್ಲೇ ಇರಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮಗಾಗಿ, ನಿಮ್ಮ ಕುಟುಂಬ, ಸ್ನೇಹಿತರು, ನಿಮ್ಮ ಸುತ್ತಮುತ್ತಲಿನವರಿಗಾಗಿ ಇದನ್ನು ಪಾಲಿಸಿ. ಪ್ರತಿಯೊಬ್ಬ ವೈದ್ಯರು ಒಂದೇ ಮಾತನ್ನು ಹೇಳುತ್ತಿದ್ದಾರೆ: ಮನೆಯಲ್ಲೇ ಇರಿ, ನಿಮಗೆ ತಿಳಿದಿರುವ ಪ್ರತಿಯೊಬ್ಬರೂ ಮನೆಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಿ, ನೀವು ಮಾಸ್ಕ್ ಧರಿಸಿ ಹೊರಹೋಗಬೇಕಾದರೆ, ನಿಮ್ಮ ಸುತ್ತಮುತ್ತಲಿನವರೊಂದಿಗೆ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ… ನಾವು ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಲಸಿಕೆ ಪಡೆಯಿರಿ. ಇದನ್ನು ಮಾಡುವುದರಿಂದ ನಮ್ಮ ವೈದ್ಯಕೀಯ ವ್ಯವಸ್ಥೆಯ ಮೇಲಿನ ಅಗಾಧ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿದಂತಾಗುತ್ತದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇನ್ನು, ಭಾರತವು ಈಗ ಇಡೀ ವಿಶ್ವದಲ್ಲಿ ಎರಡನೇ ಗರಿಷ್ಠ ಸಂಖ್ಯೆಯ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿದೆ. ವೈರಸ್‌ ನ ಎರಡನೇ ಅಲೆಯ ಹಿನ್ನೆಲೆಯಲ್ಲಿ ದೇಶವು ಆಸ್ಪತ್ರೆಯ ಹಾಸಿಗೆಗಳು, ವೆಂಟಿಲೇಟರ್‌ಗಳು, ಆರ್‌ ಟಿ-ಪಿಸಿಆರ್ ಪರೀಕ್ಷಾ ಕಿಟ್‌ ಗಳು ಮತ್ತು ರೆಮಿಡಿಸಿವಿರ್  ನಂತಹ ಕೆಲವು ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ.

ಇದನ್ನೂ ಓದಿ : ಸಮಾಜ ಬಾಂಧವರ ಯೋಗಕ್ಷೇಮ ಸಂಘದ ಮುಖ್ಯ ಧ್ಯೇಯ: ಚಂದ್ರಹಾಸ್‌ ಶೆಟ್ಟಿ

ಸಿನೆಮಾ – Udayavani – ಉದಯವಾಣಿ
Read More