ಚಿಕ್ಕಮಗಳೂರು: ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಕಂಡು ಬಂದ ವ್ಯತ್ಯಯ ಕುರಿತಂತೆ ಸಲಹೆ ರೂಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಸೋಂಕಿನ ನಿಯಂತ್ರಣಕ್ಕೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನನ್ನ ಗಮನಕ್ಕೆ ಬಂದ ವಿಚಾರವನ್ನ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿದ್ದೇನೆ. ಹೆಲ್ಪ್​​​ ಲೈನ್ ಜಾಸ್ತಿ ಮಾಡಬೇಕು, ರೆಮಿಡಿಸಿವಿರ್ ಮತ್ತು ಆಕ್ಸಿಜನ್ ಎಷ್ಟಿದೆ ಎಂದು ಸರ್ಕಾರ ಹೇಳಬೇಕು. ಆಸ್ಪತ್ರೆಯಲ್ಲಿ ಎಷ್ಟು ಬೆಡ್​ ಖಾಲಿ ಇದೆ ಎಂದು ಆಸ್ಪತ್ರೆ ಎದುರು ಹೆಲ್ಪ್​​ ಡೆಸ್ಕ್ ಹಾಕಬೇಕು. ಈ ಎಲ್ಲಾ ಸೌಲಭ್ಯ ಇರಬೇಕು ಎಂಬ ಸಲಹೆಯನ್ನು ಸರ್ಕಾರಕ್ಕೆ ಕೊಟ್ಟಿದ್ದೇನೆ.

ಪತ್ರ ಬರೆದ ವಿಚಾರದಲ್ಲೂ ಲೋಪ ಹುಡುಕುವವರನ್ನ ದೇವರೇ ಕಾಪಾಡಬೇಕು. ಕೊರೊನಾ ಸೋಂಕಿಗೆ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಅಂತಿಲ್ಲ ಎಲ್ಲರಿಗೂ ಬರುತ್ತಿದೆ. ನಾವು ಕೂಡ ಪಕ್ಷ-ಧರ್ಮ ನೋಡದೆ ಎಲ್ಲರಿಗೂ ಸಹಾಯ ಮಾಡುತ್ತಿದ್ದೇವೆ. ಇಂತಹ ದುಃಖದ ಸಂದರ್ಭದಲ್ಲಿ ಪಕ್ಷ ರಾಜಕಾರಣ ಮಾತನಾಡುವವರನ್ನ ದೇವರೇ ಕಾಪಾಡಲಿ ಎಂದು ತಿಳಿಸಿದರು.

 

The post ‘ಕೋವಿಡ್ ನಿರ್ವಹಣೆ ಸರಿಯಿಲ್ಲ’ ಯಡಿಯೂರಪ್ಪ ಸರ್ಕಾರದ ವಿರುದ್ಧ ಸಿಡಿದ ಶೋಭಾ ಕರಂದ್ಲಾಜೆ appeared first on News First Kannada.

Source: newsfirstlive.com

Source link