ಕೋವಿಡ್ ಮಹಾಮಾರಿಗೆ ನಿರ್ದೇಶಕ ತಮೀರ ಸಾವು

ಚೆನ್ನೈ: ಮಹಾಮಾರಿ ಕೋವಿಡ್ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ತಮಿಳು ಚಿತ್ರರಂಗದ ಹಿರಿಯ ಸಿನಿಮಾ ನಿರ್ದೇಶಕ ತಮೀರ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿನಿಂದ ನರಳುತ್ತಿದ್ದ ತಮೀರ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ.

ಫೇಮಸ್ ನಿರ್ದೇಶಕರುಗಳಾದ ಕೆ. ಬಾಲಚಂದೆರ್ ಹಾಗೂ ಭಾರತೀಯರಾಜಾ ಅವರ ಬಳಿ ಸಹಾಯಕ ನಿರ್ದೇಶಕರಾಗಿ ತಮೀರ ಕೆಲಸ ಮಾಡಿದ್ದರು. ತಮಿಳಿನ ‘ರೆಟ್ಟೈಸುಜಿ’ ಸಿನಿಮಾ ಮೂಲಕ ಫುಲ್ ಪ್ಲೆಡ್ಜ್ ನಿರ್ದೇಶಕರಾಗಿ ಬಡ್ತಿ ಪಡೆದರು. ಬೆಳ್ಳಿ ಪರದೆ ಮೇಲಿನ ಸಿನಿಮಾಗಳಷ್ಟೆ ಅಲ್ಲದೆ ವೆಬ್ ಸಿರಿಸ್‍ಗಳಿಗೂ ಇವರು ವರ್ಕ್ ಮಾಡಿದ್ದಾರೆ. ಇವರ ನಿರ್ದೇಶಿಸಿದ್ದ ‘ಪರ್ಫೆಕ್ಟ್ ಹಸ್‍ಬಂಡ್’ ವೆಬ್ ಸಿರಿಸ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಕೋವಿಡ್ ಎರಡನೇ ಅಲೆಗೆ ಚಿತ್ರರಂಗದ ಕೆಲವರು ಬಲಿಯಾಗಿದ್ದಾರೆ. ಸೋಮವಾರವಷ್ಟೆ ಕನ್ನಡ ಚಿತ್ರದಲ್ಲಿ ಕೋಟಿ ನಿರ್ಮಾಪಕರೆಂದೆ ಖ್ಯಾತಿ ಪಡೆದ ರಾಮು ಅವರು ಕೋವಿಡ್‍ಗೆ ಬಲಿಯಾಗಿದ್ದಾರೆ. ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಮಾಲಾಶ್ರೀಯವರ ಪತಿಯೂ ಆಗಿದ್ದ ರಾಮು, ಕೋವಿಡ್ ವಿರುದ್ಧ ಹೋರಾಟದಲ್ಲಿ ಸೋತು ಸಾವಿಗೆ ಶರಣಾದರು.

ಸಿನೆಮಾ – Udayavani – ಉದಯವಾಣಿ
Read More

Leave a comment