ಕೊರೊನಾ ವಿರುದ್ಧದ ಸಮರಕ್ಕೆ ವ್ಯಾಕ್ಸಿನ್ ಅತ್ಯಅವಶ್ಯಕ. ಈ ನಿಟ್ಟಿನಲ್ಲಿ ಜನ ಸಾಮಾನ್ಯರಿಂದ ಹಿಡಿದು ಸಿನಿಮಾ ಸೆಲೆಬ್ರಿಟಿಗಳ ತನಕ ಲಸಿಕೆಯನ್ನ ಹಾಕಿಸಿಕೊಳ್ತಿದ್ದಾರೆ. ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಗಳಲ್ಲೊಂದಾದ ದೂಧ್ ಪೇಡ ದಿಗಂತ್ ಮತ್ತು ಐಂದ್ರಿತಾ ರೇ ಲಸಿಕೆ ಚುಚ್ಚು ಮದ್ದನ್ನ ಹಾಕಿಸಿಕೊಂಡಿದ್ದಾರೆ.

ಸದ್ಯಕ್ಕಂತೂ ದೇಶದಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಸರ್ಕಾರ ವ್ಯಾಕ್ಸಿನ್ ಪೂರೈಕೆಗಾಗಿ ಸರ್ಕಸ್ ಮಾಡ್ತಿದೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರು ಲಸಿಕೆಯನ್ನ ಹೇಗೆ ಪಡೆಯೋದು ಅನ್ನೋ ಮಾಹಿತಿಯ ಕೊರತೆ ಇದೆ. ಈ ಕಾರಣಕ್ಕೆ ಲಸಿಕೆಯ ಮಹತ್ವ ಹಾಗೂ ಲಸಿಕೆಯನ್ನ ಪಡೆಯೋದು ಹೇಗೆ ಅನ್ನೋ ವಿಚಾರವನ್ನ ‘ಮನಸಾರೆ’ ಜೋಡಿ ಐಂದ್ರಿತಾ ರೇ ಮತ್ತು ದಿಗಂತ್ ತಿಳಿಸಿಕೊಟ್ಟಿದ್ದಾರೆ. ನಾವು ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ ನೀವು ಹಾಕಿಸಿಕೊಳ್ಳಿ ಹಾಗೂ ಹೇಗೆ ಹಾಕಿಸಿಕೊಳ್ಳಬೇಕು ಎಂಬುದನ್ನ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿಕೊಟ್ಟಿದ್ದಾರೆ.

ಬೇಡಿಕೆ ಇರೋ ಲಸಿಕೆಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನ ಹಾಕಿಕೊಳ್ತಿದ್ದು ಅನೇಕ ಖಾಸಗಿ ಕಂಪನಿಗಳ ಜೊತೆ ಕೈ ಜೋಡಿಸಿ ಈ ವರ್ಷದ ಅಂತ್ಯದೊಳಗೆ 216 ಕೋಟಿ ಲಸಿಕೆಯನ್ನ ಉತ್ಪತಿ ಮಾಡಲು ನಿರ್ಧರಿಸಲಾಗಿದೆ.

 

View this post on Instagram

 

A post shared by Aindrita Ray (@aindrita_ray)

 

 

The post ಕೋವಿಡ್ ಲಸಿಕೆಯ ಬಗ್ಗೆ ದಿಗ್ಗಿ-ಆ್ಯಂಡಿ ಅಭಿಯಾನ appeared first on News First Kannada.

Source: newsfirstlive.com

Source link