ಗದಗ: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಿಎಂ ಬಿಎಸ್‍ವೈ ನೀಡಿರುವ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಸಾಕಗಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಟೀಕೆ ಮಾಡಿದ್ದಾರೆ.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಎಚ್.ಕೆ ಪಾಟೀಲ್, ಯಡಿಯೂರಪ್ಪ ಕೊರೊನಾ ಕಷ್ಟಕಾಲದಲ್ಲಿ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಏನು ಪ್ರಯೋಜನ ಇಲ್ಲ. ಅದರಲ್ಲೂ ಕಲಾ ತಂಡದಲ್ಲಿ ಎಂಟತ್ತು ಜನರಿರುತ್ತಾರೆ ಅವರಿಗೆ 3 ಸಾವಿರ ಯಾವ ಲೆಕ್ಕ ಎಂದು ಹೇಳುವ ಮೂಲಕ ಆರ್ಥಿಕ ಪ್ಯಾಕೇಜ್ ಬಗ್ಗೆ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ಟೀಕೆ ಬಂದಿದೆ ಎಂದು ನೀವು ಈ ಕುರಿತು ಯೋಚಿಸಿಸುವುದು ಬೇಡ ಯಡಿಯೂರಪ್ಪನವರೇ ವ್ಯವಹಾರಿಕವಾಗಿ ಆಲೋಚಿಸಿ. ಆಗ ನಿಮಗೆ ತಿಳಿಯುತ್ತದೆ. ತಕ್ಷಣವೇ ಬಡವರಿಗೆ ಮೂರು ಪಟ್ಟು ಹಣ ಕೊಡಲು ವ್ಯವಸ್ಥೆ ಮಾಡಿ ಇದನ್ನು ಹೊರತು ಪಡಿಸಿ. ನೀವು ಈಗ ಕೊಟ್ಟಿರುವ ಪ್ಯಾಕೇಜ್‍ನಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ನಿರ್ಣಯ ಮಾಡಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಹಣ ಕೊಡಿ. ಆಗಲೇ ಜನರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

The post ಕೋವಿಡ್ ವಿಶೇಷ ಪ್ಯಾಕೇಜ್ ಬಡವರ ಬ್ರೇಕ್ ಫಾಸ್ಟ್ ಗೂ ಆಗಲ್ಲ-ಎಚ್.ಕೆ ಪಾಟೀಲ್ appeared first on Public TV.

Source: publictv.in

Source link