ಬೆಂಗಳೂರು: ಕೋವಿಡ್ ವ್ಯಾಕ್ಸಿನೇಷನ್​​​​ ಡ್ರೈವ್​​ನಲ್ಲಿ ರಾಜ್ಯದಲ್ಲೇ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದು ಹಾವೇರಿ ಜಿಲ್ಲೆ ಹಿಂದೆಬಿದ್ದಿದೆ.

ದೇಶಾದ್ಯಂತ ಜನವರಿ 16 ರಿಂದ ಆರಂಭವಾಗಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ರಾಜ್ಯದ ಹಲವು ಜಿಲ್ಲೆಗಳು ಶೇ. 40 ರಷ್ಟು ಕೂಡ ಸಾಧಿಸಿಲ್ಲ.. ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರ ಶೇ. 50ರಷ್ಟು ಲಸಿಕಾ ಅಭಿಯಾನ ಪೂರೈಕೆ ಮಾಡಿದೆ. ಉಳಿದಂತೆ ಹಲವು ಜಿಲ್ಲೆಗಳು ಶೇ. 20-30% ರ ಅಸುಪಾಸಿನಲ್ಲಿವೆ..

ಮೊದಲ ಡೋಸ್ ಪಡೆದವರು ಎಷ್ಟು ಜನ?

  • 18-44 ವರ್ಷ ವಯಸ್ಸು- 52,06,190
  • 45 ವರ್ಷ ಮೇಲ್ಪಟ್ಟವರು- 1,06,11,739
  • ಒಟ್ಟು – 1,73,63,581

ಎರಡನೇ ಡೋಸ್ ಪಡೆದವರು ಎಷ್ಟು ಜನ?

  • 18-44 ವರ್ಷ ವಯಸ್ಸು- 45,688
  • 45 ವರ್ಷ ಮೇಲ್ಪಟ್ಟವರು- 26,25,343
  • ಒಟ್ಟು- 34,08,896

ರಾಜ್ಯದಲ್ಲಿ ಒಟ್ಟಾರೆ ಈ ತನಕ 2,07,72,477 ಜನರಿಗೆ ಲಸಿಕೆಯನ್ನ ಹಾಕಲಾಗಿದೆ‌. ಇದರಲ್ಲಿ ಮೊದಲ ಡೋಸ್ ಲಸಿಕೆಯನ್ನು 1,73,63,581 ಮಂದಿ ಪಡೆದಿದ್ದು, ಎರಡನೇ ಡೋಸ್​ ಅನ್ನು 34,08,896 ಮಂದಿ ಪಡೆದಿದ್ದಾರೆ.

ಶೇ. 30 ರಷ್ಟು ದಾಟದ ಜಿಲ್ಲೆಗಳ ಪಟ್ಟಿ:

1) ಹಾವೇರಿ- 18.14%.

2) ಕಲಬುರಗಿ- 18.31%.

3) ವಿಜಯಪುರ- 22.88%.

4) ಬೆಳಗಾವಿ – 22.93%.

5) ರಾಯಚೂರು-23.36%.

6) ಯಾದಗಿರಿ- 24.12%.

7) ದಾವಣಗೆರೆ- 24.70%.

8) ಬೀದರ್ – 27.18%.

9) ಬಾಗಲಕೋಟೆ-27.42%

10) ಧಾರವಾಡ- 27.94%

11) ಬಳ್ಳಾರಿ- 27.96%

12) ಕೊಪ್ಪಳ- 28.91%

13) ಚಾಮರಾಜನಗರ-29.70%

14) ಗದಗ- 29.94%.

15) ಶಿವಮೊಗ್ಗ- 30.53%.

16) ಚಿತ್ರದುರ್ಗ – 30.55%.

ಶೇ. 30ಕ್ಕಿಂತ ಹೆಚ್ಚು ಲಸಿಕಾಭಿಯಾನ ಪೂರೈಸಿದ ಜಿಲ್ಲೆಗಳು:

17) ಉಡುಪಿ- 31.11%.

18) ಚಿಕ್ಕಮಗಳೂರು – 32.41%.

19) ಹಾಸನ – 33.03%.

20) ಚಿಕ್ಕಬಳ್ಳಾಪುರ- 33.86%.

21) ಮಂಡ್ಯ- 33.92%.

22) ಉತ್ತರ ಕನ್ನಡ- 34.53%.

23) ಬೆಂಗಳೂರು ಗ್ರಾಮಾಂತರ- 35.09%.

24) ದಕ್ಷಿಣ ಕನ್ನಡ- 35.36%.

25) ಕೊಡಗು- 37.97%.

26) ಕೋಲಾರ- 38.59%.

27) ಮೈಸೂರು- 39.31%.

28) ರಾಮನಗರ- 40.12%.

29) ಉಡುಪಿ – 42.91%.

30) ಬೆಂಗಳೂರು- 57.59%

The post ಕೋವಿಡ್ ವ್ಯಾಕ್ಸಿನೇಷನ್: ರಾಜ್ಯದಲ್ಲಿ​ ಯಾವ ಜಿಲ್ಲೆ ಫಸ್ಟ್​​, ಯಾವುದು ಲಾಸ್ಟ್? appeared first on News First Kannada.

Source: newsfirstlive.com

Source link