ಕಲಬುರಗಿ: ಮಾಹಾಮಾರಿ ಕೊರೊನಾ ಎರಡನೇ ಅಲೆ ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಹೆಮ್ಮಾರಿ ಆರ್ಭಟಕ್ಕೆ ಲಕ್ಷಾಂತರ ಜನ ಮಸಣ ಸೇರುತ್ತಿದ್ದಾರೆ. ಭಯ, ಭೀತಿ ಹುಟ್ಟಿಸಿ ಕಾಡ್ತಿರೋ ಕೊರೊನಾ ನಿರ್ಮೂಲನೆಗೆ ಜನ ಇದೀಗ ದೇವರ ಮೊರೆ ಹೋಗ್ತಿದ್ದಾರೆ. ಪ್ರಸಿದ್ಧ ದತ್ತನ ಆಸ್ಥಾನದಲ್ಲೂ ಕೊರೊನಾ ನಿರ್ಮೂಲನೆಗೆ ಅರ್ಚಕರು ಹೋಮ-ಹವನದ ಮೊರೆ ಹೋಗಿದ್ದಾರೆ.

ಕೊರೊನಾ ನಿರ್ಮೂಲನೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಸುಪ್ರಸಿದ್ಧ ಶ್ರೀ ದತ್ತಾತ್ರೇಯನ ಆಸ್ಥಾನದಲ್ಲಿ ಹೋಮ-ಹವನ ಮಾಡಲಾಗಿದೆ. ಗಾಣಗಾಪುರದ ಸಮಸ್ತ ಅರ್ಚಕರು ಸೇರಿಕೊಂಡು ಭೀಮಾ-ಅಮರ್ಜಾ ನದಿ ಕೂಡುವ ಸಂಗಮದಲ್ಲಿ ಕಳೆದ ಮೂರು ದಿನಗಳಿಂದ ಪಾರಾಯಣ, ಹೋಮ-ಹವನ ಮಾಡುತ್ತ ದತ್ತಾತ್ರೇಯನಿಗೆ ವಿಶೇಷ ಪೂಜೆ ನೇರವೇರಿಸಿ ಕೊರೊನಾ ಶಮನಕ್ಕೆ ಪ್ರಾರ್ಥಿಸಿದ್ದಾರೆ.

ಇತ್ತ ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮಸ್ಥರು ಊರ ಹೊರಗಿನ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆ ವಿಪರೀತ ಕಾಟಕ್ಕೆ ಜನ ಅಕ್ಷರಶಃ ಕಂಗಾಲಾಗಿದ್ದಾರೆ. ಹೇಗಾದ್ರು ಮಾಡಿ ಕೊರೊನಾ ತೊಲಗಲಿ ಅಂತಾ ರಾಜ್ಯದ ಹಲವೆಡೆಗಳಲ್ಲಿ ಜನರು ಹೋಮ, ಹವನ, ಪೂಜೆ ಮಾಡುತ್ತ ದೇವರ ಮೊರೆ ಹೋಗ್ತಿದ್ದಾರೆ.

The post ಕೋವಿಡ್ ಶಮನವಾಗಲೆಂದು ಗಾಣಗಾಪುರದ ದತ್ತಾತ್ರೇಯ ದೇಗುಲದಲ್ಲಿ ಹೋಮ-ಹವನ appeared first on News First Kannada.

Source: newsfirstlive.com

Source link