ನವದೆಹಲಿ: ಹರಿಯಾಣದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಅಂಕಿ ಅಂಶಗಳಲ್ಲಿ ಏರುಪೇರು ಕೇಳಿಬಂದಿದ್ದು ಸರ್ಕಾರ ನೀಡಿರುವ ಅಂಕಿ ಅಂಶಗಳಿಗಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆಂದು ಚರ್ಚೆಗಳು ನಡೆಯುತ್ತಿವೆ.

ಈ ಕುರಿತು ಪ್ರಶ್ನಿಸಿದ ಮಾಧ್ಯಮಗಳಿಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್.. ಸಾವನ್ನಪ್ಪಿದವರು ಎಂದಿಗೂ ತಿರುಗಿ ಬರೋದಿಲ್ಲ. ಸಾವ್ನನಪ್ಪಿದವರ ಡೇಟಾ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ವ್ಯತ್ಯಯ ಕೇಳಿಬಂದಿರುವುದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು.. ಇಂಥ ಭಯಾನಕ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದವರ ಡೇಟಾ ಇಟ್ಟುಕೊಂಡು ಚರ್ಚೆ ಮಾಡಿದರೆ ಅರ್ಥವಿಲ್ಲ. ಅದರ ಬದಲಿಗೆ ನಾವು ರೋಗದಿಂದ ಗುಣಮುಖವಾಗುವುದರತ್ತ ಫೋಕಸ್ ಮಾಡಬೇಕಿದೆ ಎಂದಿದ್ದಾರೆ.

The post ಕೋವಿಡ್ ಸಾವಿನ ಸಂಖ್ಯೆ ಏರುಪೇರು.. ‘ಸತ್ತವರು ತಿರುಗಿ ಬರಲ್ಲ’ ಎಂದ ಹರಿಯಾಣ ಸಿಎಂ appeared first on News First Kannada.

Source: newsfirstlive.com

Source link