ಸದಾ ಒಂದೆಲ್ಲಾ ಒಂದು ಸುದ್ದಿಯಲ್ಲಿರುವ ಮಧ್ಯಪ್ರದೇಶದ ರೇವಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಅಧಿಕಾರಿಗಳಿಗೆ ಕರ್ತವ್ಯದ ಜವಾಬ್ದಾರಿ ತಿಳಿಸಿಕೊಡುವ ಉದ್ದೇಶದಿಂದ ಖುದ್ದು ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ.

ಮಿಶ್ರಾ ಅವರು ಮೌಗಂಜ್ ತೆಹ್​ಸಿಲ್​ನ ಕೋವಿಡ್ ಕೇರ್ ಸೆಂಟರ್​ ತಪಾಸಣೆಗಾಗಿ ಬಂದಿದ್ದರು. ಈ ವೇಳೆ ಕೋವಿಡ್ ಸೆಂಟರ್ ತುಂಬಾ ಗಲೀಜಾಗಿತ್ತು. ಇದನ್ನ ಗಮನಿಸಿದ ಸಂಸದರು ಕ್ಲೀನಿಂಗ್​ಗೆ ಮುಂದಾದ್ರು. ಕೈಗೆ ಗ್ಲೌಸ್ ಹಾಕಿಕೊಂಡು ಟಾಯ್ಲೆಟ್​ನ ಕಮೋಡ್​ ಕೂಡ ಸ್ವತಃ ಅವರೇ ಕ್ಲೀನ್ ಮಾಡಿದ್ದಾರೆ.

ಇನ್ನು ಕ್ಲೀನ್ ಮಾಡುವ ವೇಳೆ ಮಿಶ್ರಾ ಅವರು ಬ್ರಷ್ ಮತ್ತು ಬಕೆಟ್ ನೀಡುವಂತೆ ಅಧಿಕಾರಿಗಳ ಬಳಿ ಕೇಳಿದ್ರು. ಆದ್ರೆ ಅದನ್ನ ನೀಡಲು ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ಕೈಯಲ್ಲೇ ಕ್ಲೀನ್ ಮಾಡಿದ್ದಾರೆ ಅಂತಾ ವರದಿಯಾಗಿದೆ. ಟಾಯ್ಲೆಟ್ ಕ್ಲೀನ್ ಮಾಡಿದ ಬಳಿಕ ಅಧಿಕಾರಿಗಳಿಗೆ ಕೋವಿಡ್ ಸೆಂಟರ್​ಗಳನ್ನ ಕ್ಲೀನ್ ಆಗಿ ಇರುವಂತೆ ನೋಡಿಕೊಳ್ಳಬೇಕು ಅಂತಾ ಸಂಸದರು ಎಚ್ಚರಿಸಿದ್ದಾರೆ.

The post ಕೋವಿಡ್ ಸೆಂಟರ್​​ನ ಟಾಯ್ಲೆಟ್ ಸ್ವತಃ​ ಸ್ವಚ್ಛಗೊಳಸಿದ ಬಿಜೆಪಿ ಸಂಸದ appeared first on News First Kannada.

Source: newsfirstlive.com

Source link