ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಕೋವಿಡ್ ಸೋಂಕಿಗೆ ಸಾವನ್ನಪ್ಪಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢ ಪಟ್ಟಿತ್ತು, ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ದುರದೃಷ್ಟವಶಾತ್ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ನಿರ್ಮಾಪಕ ರಾಮು ಅವರು ಗೂಳಿ, ಕಲಾಸಿಪಾಳ್ಯ, ಲಾಕಪ್ ಡೆತ್, ಕಲಾಸಿಪಾಳ್ಯ, ರಜನಿ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಲೇಡಿ ಪೋಲೀಸ್, ಲೇಡಿ ಕಮಿಷನರ್, ಕಿಚ್ಚ, ಕಿರಣ್ ಬೇಡಿ, ಲಾ ಅಂಡ್ ಆರ್ಡರ್, ಏ.ಕೆ.47, ರಾಕ್ಷಸ,ಗೂಳಿ, ಕಿಚ್ಚ ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಇವರ ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರ ರಂಗ ಕಂಬನಿ ಮಿಡಿದಿದೆ.

ಸಿನೆಮಾ – Udayavani – ಉದಯವಾಣಿ
Read More

Leave a comment