ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ಲಸಿಕೆ ಪಡೆದವ್ರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವ್ಯಾಕ್ಸಿನ್ ಪಡೆದವ್ರಲ್ಲಿ ಅಡ್ಡಪರಿಣಾಮಗಳು ವರದಿಯಾಗಿಲ್ಲ. ಕೋವಿಶೀಲ್ಡ್ ಪಡೆದವ್ರಲ್ಲಿ ಹೆಚ್ಚಾಗಿ ಸೈಡ್ಎಫೆಕ್ಟ್ಸ್ ಕಂಡು ಬಂದಿದೆ ಎಂದು ಸಚಿವಾಲಯ ಹೇಳಿದೆ.

ಜೀವಕ್ಕೆ, ಆರೋಗ್ಯಕ್ಕೆ ಹಾನಿಯಿಲ್ಲ
ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದ 23 ಸಾವಿರ ಜನ್ರಿಗೆ ಪ್ರತಿಕೂಲ ಪರಿಣಾಮವಾಗಿದೆ. ಅದ್ರಲ್ಲಿ 700 ಕೇಸ್ಗಳು ಗಂಭೀರ ಸ್ವರೂಪ ಪಡೆದಿದ್ದವು. ವ್ಯಾಕ್ಸಿನ್ ಪಡೆದ 498 ಗಂಭೀರ ಕೇಸ್​ಗಳನ್ನ ಎಇಎಫ್ಐ ಕಮಿಟಿ ಅಧ್ಯಯನ ಮಾಡಿದೆ. ಅದ್ರಲ್ಲಿ ಇಪ್ಪತ್ತಾರು ಜನ್ರಲ್ಲಿ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದೆ. ಆದ್ರೆ ಇದ್ರಿಂದ ಆರೋಗ್ಯಕ್ಕಾಗಲೀ, ಜೀವಕ್ಕಾಗಲೀ ಯಾವುದೇ ಹಾನಿಯಾಗಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

ಲಸಿಕೆ ಪಡೆದವರಲ್ಲಿ ಕಂಡುಬರುತ್ತಿರುವ ಅಡ್ಡಪರಿಣಾಮಗಳು
ಎದೆ ನೋವು, ಕೈ ನೋವು, ಊತ, ಕೈ ಹೊಡೆತ, ಲಸಿಕೆ ಚುಚ್ಚಿದ ಜಾಗದ ಸುತ್ತ ಕೆಂಪಾಗುವುದು, ಹೊಟ್ಟೆ ನೋವು ಜೊತೆಗೆ ವಾಂತಿಯಾಗುವುದು, ಕಣ್ಣು ಮಂಜಾಗುವುದು, ಕಣ್ಣು ನೋವಾಗುವುದು, ಯಾವುದೇ ಕಾರಣವಿಲ್ಲದೆ ವಾಂತಿಯಾಗುವುದು. ಗೊಂದಲ, ಮಾನಸಿಕ ಸಮತೋಲನ ಕಳೆದುಕೊಳ್ಳುವುದು, ಆಗಾಗ ತಲೆನೋವು ಕಾಣಿಸಿಕೊಳ್ಳುವುದು.

ಅಡ್ಡ ಪರಿಣಾಮ ಕಂಡುಬಂದರೆ ಏನು ಮಾಡ್ಬೇಕು..?

  • ಲಸಿಕೆ ಪಡೆದ ಇಪ್ಪತ್ತು ದಿನಗಳ ನಂತರವೂ ಈ ಲಕ್ಷಣಗಳು ಕಂಡುಬಂದರೆ.. ಲಸಿಕೆ ಪಡೆದುಕೊಂಡ ಕೇಂದ್ರಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಳ್ಳಿ,
  • ತೀವ್ರ ತಲೆನೋವು ಕಂಡುಬಂದರೆ ಎಚ್ಚರ ವಹಿಸಿ.
  • ರಕ್ತ ಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದ್ರೆ ಆರೋಗ್ಯ ಕೇಂದ್ರಗಳಿಗೆ ಭೇಟಿ‌ ನೀಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಹೇಳಿದೆ

The post ಕೋವಿಶೀಲ್ಡ್ ಪಡೆದ ಕೆಲವರಿಗೆ ಸೈಡ್ಎಫೆಕ್ಸ್ಟ್​​​: ಆರೋಗ್ಯ ಸಚಿವಾಲಯದಿಂದ ಸ್ಪಷ್ಟನೆ, ಮಾರ್ಗಸೂಚಿ ಬಿಡುಗಡೆ appeared first on News First Kannada.

Source: newsfirstlive.com

Source link