ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಯುಎಸ್​ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ನಡುವೆ ಮಾತುಕತೆ ನಡೆದ ಫಲವಾಗಿ ಯುಎಸ್​ ಕೋವಿಶೀಲ್ಡ್ ವ್ಯಾಕ್ಸಿನ್​ಗೆ ಬೇಕಾದ ಕಚ್ಚಾವಸ್ತುಗಳು ಭಾರತಕ್ಕೆ ನೀಡಲು ನಿರ್ಧರಿಸಿದೆ.

ಮಾತುಕತೆಯ ನಂತರ ಹೇಳಿಕೆ ನೀಡಿರುವ ಜೇಕ್ ಸುಲ್ಲಿವನ್.. ಕೋವಿಶೀಲ್ಡ್ ಲಸಿಕೆಯ ತಯಾರಿಕೆಗೆ ತುರ್ತಾಗಿ ಅಗತ್ಯವಿರುವ ನಿರ್ದಿಷ್ಟ ಕಚ್ಚಾ ವಸ್ತುಗಳ ಮೂಲಗಳನ್ನು ಯುನೈಟೆಡ್ ಸ್ಟೇಟ್ಸ್ ಗುರುತಿಸಿದೆ, ಅದು ತಕ್ಷಣವೇ ಭಾರತಕ್ಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಥೆರಪೆಟಿಕ್ಸ್, ಱಪಿಡ್ ಡಯಾಗ್ನೋಸ್ಟಿಕ್ ಕಿಟ್ಸ್, ವೆಂಟಿಲೇಟರ್​ಗಳು ಮತ್ತು ಪಿಪಿಇ ಕಿಟ್​ಗಳನ್ನು ತಕ್ಷಣವೇ ಭಾರತಕ್ಕೆ ಸಿಗುವಂತೆ ಮಾಡಲಾಗುತ್ತದೆ. ಅಲ್ಲದೇ ತುರ್ತು ಆಧಾರದ ಮೇಲೆ ಆಮ್ಲಜನಕ ಉತ್ಪಾದನೆ ಮತ್ತು ಸಂಬಂಧಿತ ಸರಬರಾಜುಗಳನ್ನು ಒದಗಿಸುವ ಆಯ್ಕೆಗಳನ್ನು ಯುಎಸ್ ಪರಿಗಣಿಸುತ್ತದೆ ಎಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದ ಸೀರಮ್ ಇನ್​ಸ್ಟಿಟ್ಯೂಟ್​ ಸಿಇಓ ಆದಾರ್ ಪೂನಾವಲ್ಲಾ.. ಲಸಿಕೆ ತಯಾರಿಸಲು ಅಗತ್ಯವಿರುವ ಕಚ್ಚಾವಸ್ತುಗಳನ್ನು ಅಮೆರಿಕದಿಂದ ರಫ್ತು ಮಾಡಲು ವಿಧಿಸಿರುವ ನಿರ್ಬಂಧಗಳನ್ನು ತೆಗೆಯಿರಿ ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ‘ಕಚ್ಚಾ ವಸ್ತು ರಫ್ತು ನಿಷೇಧ ತೆಗೆಯಿರಿ’ ಅಮೆರಿಕಾ ಅಧ್ಯಕ್ಷ ಜೋ ಬೈಡನ್​​ಗೆ ತಿವಿದ ಆದಾರ್​ ಪೂನಾವಾಲಾ

The post ಕೋವಿಶೀಲ್ಡ್ ಲಸಿಕೆ ತಯಾರಿಕೆಗೆ ಬೇಕಿದ್ದ ಕಚ್ಚಾವಸ್ತು ನೀಡಲು ಒಪ್ಪಿದ ಯುಎಸ್​ appeared first on News First Kannada.

Source: News First Kannada
Read More