ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ಅವಧಿಯನ್ನು ಸರ್ಕಾರ 12-16 ವಾರಕ್ಕೆ ವಿಸ್ತರಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಒಂದು ಡೋಸ್ ಪಡೆದ ಬಳಿಕ 3-4 ತಿಂಗಳ ಅವಧಿಯ ಒಳಗಡೆ ಲಸಿಕೆಯನ್ನು ಪಡೆಯಬಹುದಾಗಿದೆ.

ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ನೇಮಕಗೊಂಡ ತಜ್ಞರು ನೀಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಅವಧಿ ವಿಸ್ತರಣೆಯಾಗಿಲ್ಲ. ಈಗ ಇರುವಂತೆ 4-6 ವಾರಗಳ ಒಳಗೆ 2ನೇ ಡೋಸ್ ಪಡೆಯಬಹುದಾಗಿದೆ.

ಈಗಾಗಲೇ ಕೆನಡಾ ಸೇರಿದಂತೆ ಹಲವು ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅವಧಿಯನ್ನು 12-16 ವಾರಗಳಿಗೆ ವಿಸ್ತರಿಸಿದೆ. ಈ ಹಿಂದೆ 6-8 ವಾರಗಳ ಒಳಗಡೆ ಎರಡನೇ ಡೋಸ್ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿತ್ತು.

The post ಕೋವಿಶೀಲ್ಡ್ 2ನೇ ಡೋಸ್ ಅವಧಿ 12-16 ವಾರಕ್ಕೆ ವಿಸ್ತರಣೆ appeared first on Public TV.

Source: publictv.in

Source link