ನವದೆಹಲಿ: ಭಾರತದ ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಿ, ಪೂರೈಕೆ ಮಾಡಲು ನಾಲ್ಕು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಅಂತ ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.
ಲಸಿಕೆ ಪರೀಕ್ಷೆ, ತಂತ್ರಜ್ಞಾನ ಮತ್ತು ಅನುಮತಿ ಪ್ರಕ್ರಿಯೆ ಮೇಲೆ ಉತ್ಪಾದನೆಯ ಅವಧಿ ನಿರ್ಧಾರವಾಗುತ್ತದೆ. ಲಸಿಕೆ ಉತ್ಪಾದನೆ ವೇಳೆ ನೂರಾರು ಹಂತಗಳಿರುತ್ತವೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಉಂಟಾಗಿದ್ದು, ಕಂಪನಿಯ ವ್ಯಾಕ್ಸಿನ್ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಪ್ರಶ್ನೆಎದ್ದಿತ್ತು. ಅದರ ಬೆನ್ನಲ್ಲೇ ಭಾರತ್​ ಬಯೋಟೆಕ್​ನ ಹೇಳಿಕೆ ಹೊರಬಿದ್ದಿದೆ.
ಮಾರ್ಚ್ ತಿಂಗಳಲ್ಲಿ ಉತ್ಪಾದನೆ ಆರಂಭಿಸಿರೋ ಲಸಿಕೆಯ ಬ್ಯಾಚ್​​​​ ಪೂರ್ಣಗೊಳ್ಳಲು, ಇನ್ನೂ 120 ದಿನಗಳು ಬೇಕಾಗುತ್ತದೆ. ಆ ಬ್ಯಾಚ್​ನ ಕೋವ್ಯಾಕ್ಸಿನ್ ಲಸಿಕೆ ಜೂನ್ ನಂತರವೇ ಸಿಗಲಿದೆ ಎಂದು ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.

The post ಕೋವ್ಯಾಕ್ಸಿನ್ ಉತ್ಪಾದನೆ ಆರಂಭದಿಂದ ಗ್ರಾಹಕರಿಗೆ ತಲುಪೋವರೆಗೆ ಎಷ್ಟು ತಿಂಗಳು ಹಿಡಿಯುತ್ತೆ ಗೊತ್ತಾ? appeared first on News First Kannada.

Source: newsfirstlive.com

Source link