ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಒಮಿಕ್ರಾನ್​, ಡೆಲ್ಟಾ ವಿರುದ್ಧವೂ ಹೋರಾಡುತ್ತೆ: ಭಾರತ್​​ ಬಯೋಟೆಕ್


ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 10 ದಿನಗಳಲ್ಲಿ 10 ಸಾವಿರ ಪಾಸಿಟಿವ್ ಪ್ರಕರಣಗಳಿಂದ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಕೊರೊನಾ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಈ ನಡುವೆ ಕೇಂದ್ರ ಸರ್ಕಾರ ಮಕ್ಕಳು ಸೇರಿದಂತೆ ಆದ್ಯತೆ ಮೇರೆಗೆ ಬೂಸ್ಟರ್​ ಡೋಸ್​ ನೀಡಲು ಆರಂಭ ಮಾಡಿದೆ. ಇದರ ಅನ್ವಯ ಹೈದರಾಬಾದ್​​ ಫಾರ್ಮಾ ಸಂಸ್ಥೆ ಭಾರತ್​ ಬಯೋಟೆಕ್​​ ಬುಸ್ಟರ್​​ ಡೋಸ್​ ನೀಡುವ ಬಗ್ಗೆ ಗುಡ್​​ನ್ಯೂಸ್​ ಕೊಟ್ಟಿದೆ. ಕೋವ್ಯಾಕ್ಸಿನ್​​ ಬುಸ್ಟರ್​ ಡೋಸ್​​ ಉತ್ತಮ ಫಲಿತಾಂಶವನ್ನು ನೀಡಿದ್ದು, ಇದು ಒಮಿಕ್ರಾನ್ ಹಾಗೂ ಡೆಲ್ಟಾ ಕೊರೊನಾ ವೈರಸ್​ ವಿರುದ್ಧವೂ ಹೋರಾಟ ಮಾಡಲು ಸಹಕಾರಿ ಆಗಲಿದೆ ಎಂದು ತಿಳಿಸಿದೆ.

ಕೋವ್ಯಾಕ್ಸಿನ್​ ಲಸಿಕೆಗಳ ಬೂಸ್ಟರ್​ ಡೋಸ್​​ ಪ್ರಯೋಗದ ಫಲಿತಾಂಶಗಳು ಶೇ.100 ರಷ್ಟು ಡೆಲ್ಟಾ ರೂಪಾಂತರಿ ಹಾಗೂ ಒಮಿಕ್ರಾನ್ ವಿರುದ್ಧ ಹೋರಾಡುತ್ತದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೋವ್ಯಾಕ್ಸಿನ್​ ಎರಡನೇ ಡೋಸ್​ ತೆಗೆದುಕೊಂಡ 6 ತಿಂಗಳ ಬಳಿಕ ಬೂಸ್ಟರ್​ ಡೋಸ್​​ ನೀಡಿ ಪ್ರಯೋಗ ಮಾಡಲಾಗಿದೆ.

The post ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಒಮಿಕ್ರಾನ್​, ಡೆಲ್ಟಾ ವಿರುದ್ಧವೂ ಹೋರಾಡುತ್ತೆ: ಭಾರತ್​​ ಬಯೋಟೆಕ್ appeared first on News First Kannada.

News First Live Kannada


Leave a Reply

Your email address will not be published. Required fields are marked *