ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಟ್ರಯಲ್ ವರದಿ ಸಲ್ಲಿಕೆ

ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಟ್ರಯಲ್ ವರದಿ ಸಲ್ಲಿಕೆ

ನವದೆಹಲಿ: ಹೈದರಾಬಾದ್​ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಾನು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ವರದಿಯನ್ನ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಸಲ್ಲಿಸಿದೆ. ಈ ಬಗ್ಗೆ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ ಎಂದು ವರದಿಯಾಗಿದೆ.

ಭಾರತದಲ್ಲಿ ಒಟ್ಟು ಮೂರು ಲಸಿಕೆಗಳನ್ನ ನೀಡಲಾಗ್ತಿದ್ದು, ಅದ್ರಲ್ಲಿ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಕೂಡ ಒಂದಾಗಿದೆ. ಈ ಹಿಂದೆ ಏಪ್ರಿಲ್​ನಲ್ಲಿ, ಕೊವ್ಯಾಕ್ಸಿನ್ ಲಸಿಕೆ ಮೊದಲನೇ ಮತ್ತು ಎರಡನೇ ಕ್ಲಿನಿಕಲ್ ಟ್ರಯಲ್​ನಲ್ಲಿ ಶೇಕಡ 78ರಷ್ಟು ಪರಿಣಾಮಕಾರಿ ಅಂತ ವರದಿಯಾಗಿತ್ತು.

The post ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಟ್ರಯಲ್ ವರದಿ ಸಲ್ಲಿಕೆ appeared first on News First Kannada.

Source: newsfirstlive.com

Source link