ಬೆಂಗಳೂರು: ರಾಜ್ಯದಲ್ಲಿ 2 ನೇ ಡೋಸ್ ವ್ಯಾಕ್ಸಿನ್ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​​ಗೆ ಹೇಳಿಕೆ ನೀಡಿದ ಫನಾ ಅಧ್ಯಕ್ಷ ಡಾ. ಹೆಚ್.ಎಂ ಪ್ರಸನ್ನ.. ಖಾಸಗಿ ಆಸ್ಪತ್ರೆಗಳಲ್ಲಿ 1 ನೇ ಡೋಸ್ ನೀಡಲಾಗುತ್ತಿದೆ. 18-44 ವರ್ಷ ವಯಸ್ಸಿನವರಿಗೂ ವ್ಯಾಕ್ಸಿನ್ ನೀಡಲಾಗ್ತಿದೆ. 2 ನೇ ಡೋಸ್ ಗೆ ಆದ್ಯತೆ ನೀಡುವಂತೆ ಸರ್ಕಾರ ಸಲಹೆ ನೀಡಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ.

2 ನೇ ಡೋಸ್​ಗೇ ಕೊರತೆಯಾಗಿರುವಾಗ 1 ನೇ ಡೋಸ್ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕ ನೀಡಿದವರಿಗೆ 1 ನೇ ಡೋಸ್ ನೀಡುವುದು ಇದು ಸಮಾನತೆ ಹಕ್ಕಿಗೆ ವಿರುದ್ಧವಲ್ಲವೇ.? ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡಲು ಸಾಧ್ಯವೇ.? ಕೋವ್ಯಾಕ್ಸಿನ್ 2 ನೇ ಡೋಸ್ ಮಾತ್ರ ನೀಡುವಂತೆ ಆದೇಶ ಸಾಧ್ಯವೇ.? ಈ ಕುರಿತು ನಾಳೆ ಸರ್ಕಾರದ ನಿಲುವು ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಅರ್ಜಿಯ ವಿಚಾರಣೆಯನ್ನ ಪೀಠ ಮುಂದೂಡಿಕೆ ಮಾಡಿದೆ.

The post ಕೋವ್ಯಾಕ್ಸಿನ್ 2 ನೇ ಡೋಸ್ ಮಾತ್ರ ನೀಡುವಂತೆ ಆದೇಶ ಸಾಧ್ಯವೇ.? ಹೈಕೋರ್ಟ್ ಪ್ರಶ್ನೆ appeared first on News First Kannada.

Source: newsfirstlive.com

Source link