ಕೌಟುಂಬಿಕ ಕಲಹ ಆಸ್ತಿ ವಿಚಾರ; ತಂದೆ ಮೇಲೆ ಮಗನಿಂದಲೇ ಫೈರಿಂಗ್, ತಂದೆ ಭುಜಕ್ಕೆ ಗಂಭೀರ ಗಾಯ | Son firing on father over property issue In mysuru


ಕೌಟುಂಬಿಕ ಕಲಹ ಆಸ್ತಿ ವಿಚಾರ; ತಂದೆ ಮೇಲೆ ಮಗನಿಂದಲೇ ಫೈರಿಂಗ್, ತಂದೆ ಭುಜಕ್ಕೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ

ಮೈಸೂರು: ಕೌಟುಂಬಿಕ ಕಲಹ ಆಸ್ತಿ ವಿಚಾರ ಹಿನ್ನೆಲೆಯಲ್ಲಿ ತಂದೆ ಮೇಲೆ ಮಗನಿಂದಲೇ ಫೈರಿಂಗ್ ನಡೆದಿರುವ ಘಟನೆ ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ನಡೆದಿದೆ. ರುನಾಲ್, ತಂದೆ ಶಿವಕುಮಾರ್ ಮೇಲೆ ಏರ್‌ಗನ್‌ನಿಂದ ಗುಂಡು ಹಾರಿಸಿದ್ದಾನೆ. ತಂದೆ ಶಿವಕುಮಾರ್ ಭುಜಕ್ಕೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

4 ವರ್ಷಗಳಿಂದ ಪತ್ನಿ, ಮಗನಿಂದ ದೂರವಿದ್ದ ಶಿವಕುಮಾರ್ ನಿನ್ನೆ ಪತ್ನಿಯ ಮನೆಗೆ ಹೋಗಿ ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ್ದರು. ಈ ವೇಳೆ ಮಗ ರುನಾಲ್ ಮೇಲೆ ತಂದೆ ಶಿವಕುಮಾರ್ ಹಲ್ಲೆ ಮಾಡಿದ್ದರು. ಆಸ್ತಿ ವಿಚಾರವಾಗಿ ಮಗ ರುನಾಲ್ ಮತ್ತು ತಂದೆ ಶಿವಕುಮಾರ್ ನಡುವೆ ಪರಸ್ಪರ ಜಗಳ ಶುರುವಾಗಿ ಇಬ್ಬರೂ ಹೊಡೆದಾಡಿಕೊಂಡಿದ್ದು ತಂದೆ ಮೇಲೆ ಏರ್ ಗನ್‌ನಿಂದ ರುನಾಲ್ ಗುಂಡು ಹಾರಿಸಿದ್ದಾನೆ. ಈ ವೇಳೆ ಶಿವಕುಮಾರ್ ಭುಜಕ್ಕೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.

ಮಗು ಸಾವಿನಿಂದ ಮನನೊಂದು ತಾಯಿ ನೇಣಿಗೆ ಶರಣು?
ಇನ್ನು ಮತ್ತೊಂದೆಡೆ 6 ತಿಂಗಳ ಹಸಗೂಸು ಹೆತ್ತಮ್ಮನ ಕಣ್ಣ ಮುಂದೆಯೇ ಕೊನೆಯುಸಿರೆಳೆದ ಕಾರಣ ಮಗು ಸಾವಿನಿಂದ ಮನನೊಂದು ತಾಯಿ ನೇಣಿಗೆ ಶರಣಾದ ಮನ ಕಲಕುವ ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ನಡೆದಿದೆ. ಮನೆಯಲ್ಲಿ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

4 ವರ್ಷದ ಹಿಂದೆ ಪಲ್ಲವಿಗೆ ವಿವಾಹವಾಗಿತ್ತು. 6 ತಿಂಗಳ ಹಿಂದೆ ಪಲ್ಲವಿಗೆ ಗಂಡು ಮಗು ಜನಿಸಿತ್ತು. ಪ್ರಿ ಮೆಚ್ಯೂರ್ ಮಗುವಾದ ಹಿನ್ನೆಲೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ ಚಿಕಿತ್ಸೆ ಫಲಿಸದೆ ಗಂಡು ಮಗು ಮೃತಪಟ್ಟಿತ್ತು. ಇದರಿಂದ ಮನನೊಂದು ತಾಯಿ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಪಲ್ಲವಿ ಮೃತದೇಹದ ಬಳಿ ಡೆತ್‌ನೋಟ್‌ ಪತ್ತೆಯಾಗಿದೆ. ಪತಿ ಕೆಲಸ ಮುಗಿಸಿ ಮನೆಗೆ ವಾಪಸಾದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆ ಬಳಿಕ ಮೃತಳ ಪತಿ ಪಲ್ಲವಿ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ತನ್ನ ಪರಿಚಯಸ್ಥರ ಆ್ಯಂಬುಲೆನ್ಸ್‌ನಲ್ಲಿ ಶವ ರವಾನೆ ಮಾಡಲಾಗಿದ್ದು ಪಲ್ಲವಿ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸುದ್ದಗುಂಟೆ ಪಾಳ್ಯ ಠಾಣೆಗೆ ಪಲ್ಲವಿ ಕುಟುಂಬಸ್ಥರು ದೂರು ನೀಡಿದ್ದು ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *