‘ಕೌನ್​ ಬನೇಗಾ ಕರೋಡ್​ಪತಿ’ 1000ನೇ ಎಪಿಸೋಡ್​; ಮಗಳ ಎದುರು ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​ | Amitabh Bachchan gets emotional on 1000th episode of Kaun Banega Crorepati


‘ಕೌನ್​ ಬನೇಗಾ ಕರೋಡ್​ಪತಿ’ 1000ನೇ ಎಪಿಸೋಡ್​; ಮಗಳ ಎದುರು ಕಣ್ಣೀರು ಹಾಕಿದ ಅಮಿತಾಭ್​ ಬಚ್ಚನ್​

ಶ್ವೇತಾ ನವೇಲಿ ನಂದಾ, ಅಮಿತಾಭ್​ ಬಚ್ಚನ್​

ಕಿರುತೆರೆ ಪ್ರೇಕ್ಷಕರ ಫೇವರಿಟ್​ ಕಾರ್ಯಕ್ರಮಗಳಲ್ಲಿ ಒಂದಾದ ‘ಕೌನ್​ ಬನೇಗಾ ಬರೋಡ್​ಪತಿ’ ಈಗ ಸಾವಿರ ಎಪಿಸೋಡ್​ಗಳನ್ನು ಪೂರೈಸಿದೆ. ಅಮಿತಾಭ್​ ಬಚ್ಚನ್​ (Amitabh Bachchan) ನಡೆಸಿಕೊಡುವ ಈ ಶೋ ದೇಶಾದ್ಯಂತ ಫೇಮಸ್​ ಆಗಿದೆ. ಯಶಸ್ವಿಯಾಗಿ 13 ಸೀಸನ್​ಗಳವರೆಗೆ ಇದು ಸಾಗಿ ಬಂದಿದೆ. ಸಾವಿರಾರು ಜನರು ಹಾಟ್​ ಸೀಟ್​ನಲ್ಲಿ ಕುಳಿತು ಆಟ ಆಡಿದ್ದಾರೆ. ಜಗತ್ತಿನಲ್ಲಿರುವ ನೂರಾರು ವಿಷಯದ ಬಗೆಗಿನ ಮಾಹಿತಿಗಳ ಜೊತೆಗೆ ಮನರಂಜನೆಯನ್ನೂ ನೀಡುವ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕಾರ್ಯಕ್ರಮ ಸೋನಿ (Sony Tv) ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. 21 ವರ್ಷಗಳನ್ನು ಪೂರೈಸಿ, ಸಾವಿರದ ಎಪಿಸೋಡ್​ಗೆ ಈ ಶೋ ಕಾಲಿಟ್ಟಿದೆ. ಆ ಸಲುವಾಗಿ ಒಂದು ವಿಶೇಷ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ.

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದ 1000ನೇ ಎಪಿಸೋಡ್​ಗೆ ವಿಶೇಷ ಅತಿಥಿಗಳಾಗಿ ಅಮಿತಾಭ್​ ಬಚ್ಚನ್​ ಪುತ್ರಿ ಶ್ವೇತಾ ನವೇಲಿ ನಂದಾ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಆಗಮಿಸಿದ್ದರು. ಈ 21 ವರ್ಷಗಳ ಮಹಾನ್​ ಜರ್ನಿ ಹೇಗಿತ್ತು ಎಂಬುದನ್ನು ವಿವರಿಸುತ್ತ ಅಮಿತಾಭ್​ ಭಾವುಕರಾದರು. ಕಣ್ಣೀರು ವರೆಸಿಕೊಂಡು ಕಾರ್ಯಕ್ರಮ ಮುಂದುವರಿಸಿದರು. ಈ ವಿಶೇಷ ಎಪಿಸೋಡ್​ ಡಿ.3ರಂದು ಪ್ರಸಾರ ಆಗಲಿದೆ.

‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದ ವೇದಿಕೆಯು ಈ 21 ವರ್ಷಗಳಲ್ಲಿ ಅನೇಕ ರೆಕಾರ್ಡ್​ಗಳಿಗೆ ಸಾಕ್ಷಿ ಆಗಿದೆ. ಮೊದಲ ಬಾರಿಗೆ ಒಂದು ಕೋಟಿ ರೂಪಾಯಿ ಗೆದ್ದವರು ಯಾರು? ಮೊದಲು ಬಾರಿ 5 ಕೋಟಿ ರೂಪಾಯಿ ಯಾರ ಪಾಲಾಯಿತು? 7 ಕೋಟಿ ರೂಪಾಯಿ ಗೆದ್ದು ಇತಿಹಾಸ ಬರೆದಿದ್ದು ಯಾರು? ಕೋಟಿ ರೂ. ಪಡೆದ ಮೊದಲ ಮಹಿಳೆ ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರದಂತೆ ಇರುವ ಪ್ರೋಮೋವನ್ನು ಸೋನಿ ವಾಹಿನಿ ಶೇರ್​ ಮಾಡಿಕೊಂಡಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಜೊತೆಗೆ ಅಮಿತಾಭ್​ ಬಚ್ಚನ್​ ಅವರಿಗೆ ಒಂದು ಎಮೋಷನಲ್​ ಬಾಂಧವ್ಯ ಇದೆ. ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಸ್ಪರ್ಧಿಗಳು ಹಾಟ್​ ಸೀಟ್​ನಲ್ಲಿ ಕುಳಿತು ಬಹುಮಾನ ಗೆದ್ದಿದ್ದಾರೆ. ಕೋಟ್ಯಂತರ ರೂಪಾಯಿ ಗೆದ್ದು ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಈ ವೇದಿಕೆಗೆ ಬಂದು, ಹಣ ಗೆದ್ದಿದ್ದಾರೆ. ಆ ಹಣವನ್ನು ಚಾರಿಟಿ ಕೆಲಸಕ್ಕೆ ಬಳಸಿದ್ದಾರೆ. ಇಂಥ ನೂರಾರು ಘಟನೆಗಳಿಗೆ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದ ವೇದಿಕೆ ಸಾಕ್ಷಿ ಆಗಿದೆ. ಆ ಎಲ್ಲ ಘಟನೆಗಳನ್ನು 1000ನೇ ಎಪಿಸೋಡ್​ನಲ್ಲಿ ಅಮಿತಾಭ್​ ಬಚ್ಚನ್​ ಮೆಲುಕು ಹಾಕಲಿದ್ದಾರೆ. ಈ ಕಾರ್ಯಕ್ರಮದ ಕನ್ನಡದ ಅವತರಣಿಕೆ ‘ಕನ್ನಡದ ಕೋಟ್ಯಾಧಿಪತಿ’ ಕೂಡ ಫೇಮಸ್​ ಆಗಿದೆ. ಅದನ್ನು ಪುನೀತ್​ ರಾಜ್​ಕುಮಾರ್​ ನಡೆಸಿಕೊಡುತ್ತಿದ್ದರು.

ಇದನ್ನೂ ಓದಿ:

ಸಂಪೂರ್ಣವಾಗಿ ಬದಲಾಯ್ತು ಅಭಿಷೇಕ್​ ಬಚ್ಚನ್​ ಚಹರೆ; ಇವರು ಅಮಿತಾಭ್​ ಮಗನಾ ಎಂದು ಪ್ರಶ್ನಿಸಿದ ಫ್ಯಾನ್ಸ್​

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

TV9 Kannada


Leave a Reply

Your email address will not be published. Required fields are marked *