ಕ್ಯಾಚ್​ ಬಿಟ್ಟ ಪ್ಲೇಯರ್​ಗೆ ಕಪಾಳಮೋಕ್ಷ ಮಾಡಿದ ಪಾಕ್ ಬೌಲರ್ -‘ಥೂ’ ಎಂದ ನೆಟಿಜೆನ್ಸ್​


ಪಾಕಿಸ್ತಾನ ಪ್ರೀಮಿಯರ್​ ಲೀಗ್​ ಒಂದಿಲ್ಲೊಂದು ವಿಚಾರವಾಗಿ ಸುದ್ದಿ ಮಾಡುತ್ತಲೇ ಇದೆ. ಮೊನ್ನೆ ಬೆನ್​ ಕಟಿಂಗ್ ಹಾಗೂ ಬೌಲರ್​ ನಡುವೆ ನಡೆದ ವಾಕ್ಸಮರ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ ಇನ್ನೊಂದು ಕರಾಳ ಘಟನೆ ಈ ಲೀಗ್​ನಲ್ಲಿ ನಡೆದಿದೆ. ಸಹ ಆಟಗಾರ ಕ್ಯಾಚ್​ ಬಿಟ್ಟನೆಂದು ಬೌಲರ್ ಆತನಿಗೆ ಕಪಾಳಮೋಕ್ಷ ಮಾಡಿ ಆಕ್ರೋಶ ಹೊರಹಾಕಿದ್ದಾನೆ.

ಪೇಶಾವರ್ ಝಲ್ಮಿ ಹಾಗೂ ಲಾಹೋರ್ ಖಲಂದರ್ಸ್ ನಡುವೆ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್ ತಂಡದ ಬೌಲರ್ ಹ್ಯಾರಿಸ್ ರೌಫ್ ಓವರ್​ನಲ್ಲಿ ಪೇಶಾವರ್ ತಂಡದ ಬ್ಯಾಟರ್ ಹರ್ಜತುಲ್ಲಾ ಅವರ ಕ್ಯಾಚನ್ನು ಕಮ್ರಾನ್ ಗುಲಾಮ್ ಕೈಚೆಲ್ಲಿದರು. ಈ ವೇಳೆ ಈ ಆಟಗಾರನ ಮೇಲೆ ರೌಫ್​ ಕೊಂಚ ಗರಂ ಆಗಿದ್ದರು. ತದನಂತರದ ಓವರ್​ನಲ್ಲಿ ಹ್ಯಾರಿಸ್ ರೌಫ್ ಮತ್ತೊಬ್ಬ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಅನ್ನು ರೌಫ್ ಪಡೆದುಕೊಂಡರು.

ಈ ವೇಳೆ ಎಲ್ಲ ಆಟಗಾರರು ಸಂಭ್ರಮಿಸಲು ರೌಫ್​ ಬಳಿ ಬಂದಿದ್ದರು. ಹಾಗೆ ಕ್ಯಾಚ್​ ಬಿಟ್ಟಿದ್ದ ಆಟಗಾರ ಕಮ್ರಾನ್ ಕೂಡ ಬಂದಾಗ ರೌಫ್ ಆತನ ಕೆನ್ನೆಗೆ ಬಾರಿಸಿ ಸಿಟ್ಟಾಗಿದ್ದಾರೆ. ಈ ವಿಡಿಯೋ ವೈರಲ್​ ಆಗಯತ್ತಿದ್ದಂತೆ ಸ್ಟಾರ್​ ಬೌಲರ್​ಗೆ ನೆಟಿಜೆನ್ಸ್​ ಛೀಮಾರಿ ಹಾಕುತ್ತಿದ್ದಾರೆ. ಜೆಂಟಲ್​ಮೆನ್​ ಕ್ರೀಡೆ ಎನ್ನಿಸಿಕೊಳ್ಳುವ ಈ ಕ್ರೀಡೆಯಲ್ಲಿ ಈ ತೆರನಾದ ವರ್ತನೆಗಳು ಶೋಭೆ ತರಲ್ಲ ಎಂದು ನೆಟಿಜೆನ್ಸ್​ ರೌಫ್​ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.

 

News First Live Kannada


Leave a Reply

Your email address will not be published. Required fields are marked *