ಕ್ಯಾನ್ಸರ್​ನಿಂದ ತೀರಿಹೋದ ವರನ ಅಮ್ಮ ತೆರೆಯ ಮೇಲೆ ಮೂಡಿದಾಗ; ಮದುವೆಯ ದಿನ ಬಿಕ್ಕಳಿಸಿದ ನವಜೋಡಿ – Bride honours groom’s late mom with a special video montage


Mother : ಟಿಜೆ ಹೈಸ್ಕೂಲಿನಲ್ಲಿದ್ದಾಗ ಅವರ ಮೃತರಾದರು. ನಂತರ ಮದುವೆ ದಿನ ಟಿಜೆಯ ಭಾವೀ ಪತ್ನಿ ಎರಿನ್, ಹೇಗಾದರೂ ಅವರ ತಾಯಿಯನ್ನು ನೆನಪಿಸಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಸಿ ಗೌರವಿಸಬೇಕು ಎಂದು ಯೋಚಿಸಿದರು.

ಕ್ಯಾನ್ಸರ್​ನಿಂದ ತೀರಿಹೋದ ವರನ ಅಮ್ಮ ತೆರೆಯ ಮೇಲೆ ಮೂಡಿದಾಗ; ಮದುವೆಯ ದಿನ ಬಿಕ್ಕಳಿಸಿದ ನವಜೋಡಿ

Bride honours groom’s late mom with a special video montage

Viral Video : ತೀರಿಹೋದ ಭಾವೀಪತಿಯ ತಾಯಿಯನ್ನು ಗೌರವದಿಂದ ನೆನಪಿಸಿಕೊಳ್ಳಬೇಕೆಂದುಕೊಂಡ ವಧು, ಮದುವೆಯ ದಿನ ಹೀಗೊಂದು ಆಪ್ತ ಸನ್ನಿವೇಶವನ್ನು ಸೃಷ್ಟಿಸಿದಳು. ಆದೇನೆಂದು ತಿಳಿದುಕೊಳ್ಳಬೇಕೆಂದರೆ ನೀವೂ ಈ ವಿಡಿಯೋ ನೋಡಬೇಕು. ಬಹುಶಃ ಈ ವಿಡಿಯೋ ನೋಡಿದ ಯಾರಿಗೂ ಗಂಟಲುಬ್ಬಬಹುದು. ಈ ವಿಡಿಯೋ ಅನ್ನು ಜುಲೈನಲ್ಲಿ seajayfilms ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. worthfeed ಎಂಬ ಇನ್​ಸ್ಟಾಗ್ರಾಂ ಖಾತೆ ಇದನ್ನು ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ.

‘ಟಿಜೆ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಕ್ಯಾನ್ಸರ್​ನಿಂದ ಅವರ ತಾಯಿ ಮೃತರಾದರು. ನಂತರ ಟಿಜೆಯ ಭಾವೀ ಪತ್ನಿ ಎರಿನ್, ಹೇಗಾದರೂ ಮದುವೆಯ ದಿನ ಟಿಜೆಯ ತಾಯಿಯನ್ನು ನೆನಪಿಸಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಸಿ ಗೌರವಿಸಬೇಕು ಎಂದು ಯೋಚಿಸಿದರು. ಒಂದು ರಜೆಯ ದಿನ ಟಿಜೆಯ ಮನೆಗೆ ಹೋಗಿ, ನಿಮ್ಮ ಕುಟುಂಬದ ಹಳೆಯ ವಿಡಿಯೋಗಳನ್ನು ನೋಡಬೇಕು ಎಂದು ಹೇಳಿ ಅವರ ಬಳಿ ಇದ್ದ ವಿಡಿಯೋ ಟೇಪ್​ಗಳನ್ನು ಕೇಳಿ ಪಡೆದರು. ನಂತರ ಟಿಜೆಯೊಂದಿಗಿದ್ದ ಅವರ ತಾಯಿಯ ವಿಡಿಯೋ ಅನ್ನು ಎಡಿಟ್ ಮಾಡಿ ಮಾಂಟೇಜ್​ ತಯಾರಿಸಿ, ಮದುವೆಯ ದಿನ ಪ್ರದರ್ಶಿಸಿದರು. ಪರಸ್ಪರ ಇಬ್ಬರೂ ಬಿಕ್ಕಿಬಿಕ್ಕಿ ಅತ್ತರು. ಅರ್ಧ ದುಃಖ ಅರ್ಧ ಖುಷಿ.

ಈ ವಿಡಿಯೋ 1.7 ಲಕ್ಷಕ್ಕೂ ಹೆಚ್ಚು ಜನರಿಂದ ನೋಡಲ್ಪಟ್ಟಿದೆ. ಸುಮಾರು 12,000 ಜನರು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ಈಕೆಯ ಈ ಆಲೋಚನೆಯನ್ನು ಗೌರವಿಸಿದ್ದಾರೆ. ‘ಇಷ್ಟು ಸಾಕು ಯಾರಿಗೇ ಆಗಲಿ ಕಣ್ಣೀರು ಉಕ್ಕಲು’ ಎಂದಿದ್ದಾರೆ ಒಬ್ಬರು. ‘ಇದನ್ನು ನೋಡುತ್ತ ನಾನು ಆಫೀಸಿನಲ್ಲೇ ಅಳುತ್ತ ಕುಳಿತಿದ್ದೇನೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ತುಂಬಾ ಉತ್ತಮ ಕೆಲವಿದು. ನಿಮ್ಮ ಆಯ್ಕೆ ಸರಿ ಇದೆ ಟಿಜೆ’ ಎಂದಿದ್ದಾರೆ ಮತ್ತೊಬ್ಬರು. ‘ಎಂಥ ಸಹೃದಯಿ ಈಕೆ’ ಎಂದಿದ್ದಾರೆ ಮಗದೊಬ್ಬರು.

ಪ್ರೀತಿಸಲು ಎಷ್ಟೊಂದು ಬಗೆಗಳಿವೆ?

TV9 Kannada


Leave a Reply

Your email address will not be published.