ಕ್ಯಾನ್ಸರ್​​ ಗೆದ್ದ ಖ್ಯಾತ ನಟಿಗೆ ಒಂದೇ ದಿನ ಹಲವು ಭಾರಿ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ – Cancer survived multiple heart attacks in a single day, her health condition critical


Aindrila Sharma: ಬೆಂಗಾಲಿಯ ಧಾರವಾಹಿ ನಟಿ ಎಂಡ್ರೀಲಾ ಶರ್ಮಾ ಅವರಿಗೆ ಮಂಗಳವಾರ ಒಂದೇ ದಿನ ಹಲವು ಭಾರಿ ಹೃದಯಾಘಾತವಾಗಿದೆ ಎನ್ನಲಾಗುತ್ತಿದ್ದು, ಸದ್ಯ ಅವರನ್ನು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಯಾನ್ಸರ್​​ ಗೆದ್ದ ಖ್ಯಾತ ನಟಿಗೆ ಒಂದೇ ದಿನ ಹಲವು ಭಾರಿ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

ಎಂಡ್ರೀಲಾ ಶರ್ಮಾ

ಇತ್ತೀಚೆಗೆ ಅನೇಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಚಿತ್ರರಂಗದ ಅನೇಕರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಬೆಂಗಾಲಿಯ ಧಾರಾವಾಹಿ ನಟಿ ಎಂಡ್ರೀಲಾ ಶರ್ಮಾ (Aindrila Sharma) ಅವರಿಗೆ ಮಂಗಳವಾರ ಒಂದೇ ದಿನ ಹಲವು ಭಾರಿ ಹೃದಯಾಘಾತವಾಗಿದೆ ಎಂದು ವರದಿ ಆಗಿದೆ. ಸದ್ಯ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ ಎಂಡ್ರೀಲಾ ಶರ್ಮಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಎಂಡ್ರೀಲಾ ಶರ್ಮಾಗೆ ಮಿದುಳು ಸ್ಟ್ರೋಕ್ ಉಂಟಾಗಿದೆ. ನ. 1 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೆ ವೇಳೆ ಅವರ ಮೆದುಳಲ್ಲಿ ರಕ್ತಸ್ರಾವ ಕೂಡ ಉಂಟಾಗಿದೆ. ಹಾಗಾಗಿ ವೈದ್ಯರು ಕೆಲ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸಿಟಿ ಸ್ಕ್ಯಾನ್​​ ವರದಿ ಪ್ರಕಾರ ನಟಿಯ ಮೆದುಳಿನ ಎದುರು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಈ ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ವೈದ್ಯರು ಔಷಧಗಳನ್ನು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಎಂಡ್ರೀಲಾ ಶರ್ಮಾ ಪ್ರಿಯಕರ, ನಟ ಸಬ್ಯಸಾಚಿ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ‘ಎಂಡ್ರೀಲಾ ಶರ್ಮಾಗಾಗಿ ದೇವರಲ್ಲಿ ಪಾರ್ಥಿಸಿ’ ಎಂದು ಫ್ಯಾನ್ಸ್​​ ಬಳಿ ವಿನಂತಿಸಿದ್ದಾರೆ. ‘ಈ ರೀತಿ ಬರೆಯಬೇಕಾಗಬಹುದು ಎಂದು ಊಹಿಸಿರಲಿಲ್ಲ. ಆದಾಗ್ಯೂ ಆ ದಿನ ಬಂದಿದೆ. ಪವಾಡಸದೃಶ್ಯವಾಗಿ ಎಂಡ್ರೀಲಾ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ಅವಳು ವಿಲಕ್ಷಣ ಕಾಯಿಲೆಯ ವಿರುದ್ದ ಹೋರಾಡುತ್ತಿದ್ದಾಳೆ’ ಎಂದು ಅವರು ಬರೆದುಕೊಂಡಿದ್ದಾರೆ. ಬೆಂಗಾಲಿ ನಟ, ನಟಿಯರು ಹಾಗೂ ಅಭಿಮಾನಿಗಳು ಎಂಡ್ರೀಲಾ ಶರ್ಮಾ ಬದುಕಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಎಂಡ್ರೀಲಾ ಶರ್ಮಾ ಅವರಿಗೆ ಈ ಮೊದಲು ಕ್ಯಾನ್ಸರ್ ಉಂಟಾಗಿತ್ತು. ಅದನ್ನು ಅವರು ಜಯಿಸಿ ಬಂದಿದ್ದರು. ಈಗ ಅವರಿಗೆ ಬ್ರೈನ್​​ ಸ್ಟ್ರೋಕ್ ಆಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಎಂಡ್ರೀಲಾ ಶರ್ಮಾ ‘ಜುಮುರ್’​ ಧಾರಾವಾಹಿ ಮೂಲಕ ಕಿರುತೆಗೆ ಎಂಟ್ರಿ ಕೊಟ್ಟರು. ‘ಜಿಬೊನ್ ಜೋತ್ಯಿ’, ‘ಜಿಯೋನ್​ ಕಥಿ’ ಎಂಬ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.