ಬಿಗ್​​ ಮನೆಯ ಹೊಸ ಕ್ಯಾಪ್ಟನ್​ ಆಯ್ಕೆ ಪ್ರಕ್ರಿಯೆಯಲ್ಲಿ ಈಗಾಗಲೇ ಗೊತ್ತಿರುವ ಹಾಗೆ ನಿಂಗ್ ಐತೇ ಇರು ತಂಡ ವಿನ್ ಆಗಿ ಎಲಿಮಿನೇಶನ್ ನಿಂದ ಇಮ್ಯೂನಿಟಿ ಪಡೆಯುವುದರ ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಆಡಲು ಆಯ್ಕೆ ಆಗಿತ್ತು.

ನಿಂಗ್ ಐತೇ ಇರು ತಂಡದ ಮಂಜು ಪಾವಗಡ, ದಿವ್ಯಾ ಸುರೇಶ್, ಶಮಂತ್ ಗೌಡ, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್ ಟಾಸ್ಕ್ ನಲ್ಲಿ ಭಾಗವಹಿಸಿದ್ದರು. ಟಾಸ್ಕ್ ಪ್ರಕಾರ ಚೇರ್ ಮೇಲೆ ಕುಳಿತು, ಹಣೆಯ ಮೇಲೆ ನಾಣ್ಯಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಬೇಕು. ಇಲ್ಲಿ ನಾಣ್ಯಗಳು ಎಂದರೆ ಕ್ಯಾರಮ್ ಆಟದಲ್ಲಿ ಬಳಸಲಾಗುವ ಪ್ಯಾನ್​ಗಳು. ಜೊಡಿಸಿದ ನಾಣ್ಯಗಳು 5 ಸೆಕೆಂಡ್​ ನಿಂತುಕೊಳ್ಳಬೇಕು. ತುಂಬಾ ಬ್ಯಾಲನ್ಸ್​ ಆಗಿ ಆಡುವ ಟಾಸ್ಕ್ ಇದಾಗಿತ್ತು.

ಎಲ್ಲರೂ ಹೆಚ್ಚು ಕಡಿಮೆ ಚೆನ್ನಾಗಿಯೇ ಆಡುತ್ತಿದ್ದರು. ಆದರೆ ಸ್ಪರ್ಧೆ ಏರ್ಪಟ್ಟಿದ್ದು ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್​ ಅವರಿಗೆ. ಇಬ್ಬರು ತುಂಬಾನೇ ಬ್ಯಾಲನ್ಸಡ್​ ಆಗಿ ಆಟ ಆಡುತ್ತಿದ್ದರು. ಇದರಲ್ಲಿ ದಿವ್ಯಾ ಸುರೇಶ್ ಮೊದಲು​ ಟಾಸ್ಕ್ ಕಂಪ್ಲಿಟ್​ ಮಾಡಿ, ಈ ವಾರದ ಬಿಗ್ ಬಾಸ್ ಮನೆಯ ಎರಡನೇಯ ಮಹಿಳಾ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ.

ಬಿಗ್​ ಮನೆಯ ಸ್ಟ್ರಾಂಗ್​ ಕಂಟಸ್ಟೆಂಟ್​ಗಳಲ್ಲಿ ದಿವ್ಯಾ ಎಸ್​ ಕೂಡಾ ಒಬ್ಬರು. ಟಾಸ್ಕ್​ಗಳನ್ನು ಸಖತ್​ ಆಗಿಯೇ ಆಡುತ್ತಿದ್ದು, ಸಾಕಷ್ಟು ಬಾರಿ ದಿವ್ಯಾ ಸುರೇಶ್​ ಕ್ಯಾಪ್ಟನ್ಸಿ ಆಯ್ಕೆ ಟಾಸ್ಕ್​ನಲ್ಲಿ ಆಡಲು ಆಯ್ಕೆಯಾಗಿ ಸ್ವಲ್ಪದ್ರಲ್ಲಿಯೇ ಕ್ಯಾಪ್ಟನ್​ ಆಗುವುದನ್ನು ತಪ್ಪಿಸಿಕೊಂಡಿದ್ದರು. ಆದ್ರೇ ಈ ವಾರ ಅವರ ಕನಸು ನನಸಾಗಿದೆ.

ಇನ್ನೂ ದಿವ್ಯಾ ಸುರೇಶ್​ ಅವರ ಕ್ಯಾಪ್ಟನ್ಸಿಯಲ್ಲಿ ಮನೆ ಯಾವ ರೀತಿ ನಡೆಯಲಿದೆ. ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬ ಕೂತಹಲ ಮೂಡಿದ್ದು, ದಿವ್ಯಾ ಎಸ್​ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಕ್ಯಾಪ್ಟನ್ಸಿ ಆರಂಭದಲ್ಲೇ, ಚಕ್ರವರ್ತಿ ಚಂದ್ರಚೂಡ್​ ಫುಲ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮನ್ನ ಕಳಪೆ ನೀಡಿರುವ ಉಳಿದ ಸ್ಪರ್ಧಿಗಳ ಮೇಲೆ ಕೋಪಿಸಿಕೊಂಡಿರುವ ಚಕ್ರವರ್ತಿ, ಜೈಲಿನಲ್ಲೇ ಇದ್ಕೊಂಡು ಕಾದಾಟಕ್ಕೆ ಇಳಿದಿದ್ದಾರೆ. ಇದು ಮನೆಯ ಉಡುಗೆ ವಿಚಾರ ಹಾಗೂ ಇತರೆ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಇದನ್ನೆಲ್ಲಾ ದಿವ್ಯಾ ಸುರೇಶ್ ಹೇಗೆ ನಿಭಾಯಿಸುತ್ತಾರೆ ಅನ್ನೋದೇ ಇಂಟರೆಸ್ಟಿಂಗ್ ಆಗಿದೆ.

The post ಕ್ಯಾಪ್ಟನ್ ಆಗ್ತಿದ್ದಂತೆ ದಿವ್ಯಾಗೆ ಶಾಕ್.. ನಾಯಕತ್ವ ಜವಾಬ್ದಾರಿ ಈ ವಾರ ಅಷ್ಟು ಸುಲಭವಿಲ್ಲ..! appeared first on News First Kannada.

Source: newsfirstlive.com

Source link