ಕ್ಯಾಪ್ಟನ್ ಫೇರ್​​ವೆಲ್ ಮ್ಯಾಚ್​ಗೆ ಆಫರ್​ ಕೊಟ್ಟ BCCI- ಶಾಕಿಂಗ್ ಉತ್ತರ ಕೊಟ್ಟ ಕೊಹ್ಲಿ..


ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾ ಟೆಸ್ಟ್ ನಾಯಕತ್ವವನ್ನು ಹಠಾತ್​ ಆಗಿ ತೊರೆದು ಕ್ರಿಕೆಟ್​ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ. ನಾಯಕತ್ವಕ್ಕೆ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ಕೋಚ್​ ರಾಹುಲ್​ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್​​ ಶಾ ಮತ್ತು ಸಹ ಆಟಗಾರರಿಗೆ ವಿಷಯ ಮುಟ್ಟಿಸಿದ್ದರು. ಆದರೆ ಎಲ್ಲರೂ ಒಮ್ಮೆ ಯೋಚಿಸಿ ನಿರ್ಧಾರಕ್ಕೆ ಬರುವಂತೆ ಸೂಚಿಸಿದರೂ ಕೊಹ್ಲಿ ಕಠಿಣ ತೀರ್ಮಾನ ತೆಗೆದುಕೊಂಡು ನಾಯಕತ್ವಕ್ಕೆ ಫುಲ್​​ಸ್ಟಾಪ್​ ಇಟ್ಟರು.

ಆದರೆ ವಿರಾಟ್​ ಕೊಹ್ಲಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೆ BCCI ಅವರೊಂದಿಗೆ ಮನವಿಯೊಂದನ್ನ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕೃತವಾಗಿ ನಾಯಕತ್ವದಿಂದ ಕೆಳಗಿಳಿಯುವ ಮಾಹಿತಿ ತಿಳಿಸಿದಾಗ ಬಿಸಿಸಿಐ ಈ ಮನವಿ ಮಾಡಿದೆ. ನಾಯಕನಾಗಿ ಕೆಳಗಿಳಿಯುವ ಮುನ್ನ ವಿದಾಯದ ಪಂದ್ಯ ಆಡುವಂತೆ ಮನವಿ ಮಾಡಿತ್ತಂತೆ ಬಿಸಿಸಿಐ. ಆದ್ರೆ ಬಿಸಿಸಿಐ ಇಲ್ಲ, ಒಂದು ಪಂದ್ಯದಿಂದ ಯಾವುದೇ ದೊಡ್ಡ ಬದಲಾವಣೆ ಕಾಣುವುದಿಲ್ಲ ಎಂದು ಹೇಳುವ ಮೂಲಕ ವಿದಾಯದ ಪಂದ್ಯವನ್ನು ತಿರಸ್ಕರಿಸಿದ್ದಾರೆ.

ಟೀಮ್​ ಇಂಡಿಯಾ ತನ್ನ ಮುಂದಿನ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಎದುರು ಆಡಲಿದೆ. ಫೆಬ್ರವರಿ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ವಿಶೇಷ ಅಂದರೆ ಕೊಹ್ಲಿಗೆ ಇದು 100ನೇ ಟೆಸ್ಟ್ ಪಂದ್ಯ ಆಗಿರಲಿದೆ. ಹಾಗಾಗಿ ಬಿಸಿಸಿಐ ಅಧಿಕಾರಿಗಳು ಈ ಪಂದ್ಯವನ್ನ ಆಡಿ ವಿದಾಯ ತೆಗೆದುಕೊಳ್ಳುವಂತೆ ಸೂಚಿಸಿದ್ರಂತೆ. ಆದ್ರೆ ಕೊಹ್ಲಿ, ಬಿಸಿಸಿಐ ಅಧಿಕಾರಿಗಳ ಮನವಿಯನ್ನ ನಯವಾಗಿ ತಿರಸ್ಕರಿಸಿದ್ದಾರೆ.

The post ಕ್ಯಾಪ್ಟನ್ ಫೇರ್​​ವೆಲ್ ಮ್ಯಾಚ್​ಗೆ ಆಫರ್​ ಕೊಟ್ಟ BCCI- ಶಾಕಿಂಗ್ ಉತ್ತರ ಕೊಟ್ಟ ಕೊಹ್ಲಿ.. appeared first on News First Kannada.

News First Live Kannada


Leave a Reply

Your email address will not be published. Required fields are marked *