ಕ್ರಿಕೆಟಿಗರೆಲ್ಲಾ ಕೋಟ್ಯಾಧೀಶರು ಎಂಬ ಕಲ್ಪನೆ ಜನರಲ್ಲಿದೆ. ಆದ್ರೆ,  ಇದೇ ಜಂಟಲ್​ಮನ್​​ ಗೇಮ್​​​​ನಲ್ಲಿ​​​ ಒಂದೇ ನಾಣ್ಯದ ಎರಡು ಮುಖಗಳಂತೆ, ಎರಡು ರೀತಿಯ ಆಟಗಾರರು ಇದ್ದಾರೆ. ಒಂದು ವರ್ಗ ರಾಷ್ಟ್ರ ಹಾಗೂ ವಿಶ್ವದ ವಿವಿಧ ಲೀಗ್‌ಗಳಲ್ಲಿ ಪ್ರತಿನಿಧಿಸಿ ಕೋಟ್ಯಾಂತರ ಹಣ ಜೀಬಿಗಿಳಿಸಿ, ಅದ್ದೂರಿ ಜೀವನ ನಡೆಸುವ ಆಟಗಾರರು. ಮತ್ತೊಂದು ವರ್ಗ ಆರ್ಥಿಕ ಸಂಕಷ್ಟದಲ್ಲೇ ದೇಶವನ್ನ ಪ್ರತಿನಿಧಿಸುವವರು.

ಇದೇ ಪಟ್ಟಿಗೆ ಜಿಂಬಾಬ್ವೆಯ ಆಲ್​ರೌಂಡರ್​ ರಿಯಾನ್ ಬರ್ಲ್ ಕೂಡ ಸೇರ್ಪಡೆಯಾಗ್ತಾರೆ. ಆದರೆ, ಜಿಂಬಾಬ್ವೆ ಕ್ರಿಕೆಟಿಗ ರಿಯಾನ್​ರ ಒಂದು ಟ್ವೀಟ್​, ಕ್ರಿಕೆಟ್​ ಅಭಿಮಾನಿಗಳ ಹೃದಯ ಕರಗಿಸಿದೆ. ತಮ್ಮ ತಂಡದ ಪರಿಸ್ಥಿತಿಯ ಕುರಿತು ಟ್ವೀಟ್​ ಮಾಡಿರುವ​ ರಿಯಾನ್ ಬರ್ಲ್​, ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಶೋ ಪ್ರಾಯೋಜಕತ್ವ ನೀಡಲು ಯಾರಾದರೂ ಸಿದ್ಧರಿದ್ದೀರಾ..? ಇದರಿಂದಾಗಿ ಸರಣಿ ನಂತರ ನಮ್ಮ ಹರಿದ ಶೂಗಳನ್ನ ಅಂಟಿಸಲು ಹಿಂತಿರುಗಿಸುವ ಪರಿಸ್ಥಿತಿ ಬರಲ್ಲ ಎಂದು ಹರಿದ ಶೂ ಪೋಟೋ ಜೊತೆ ಪೋಸ್ಟ್​ ಮಾಡಿದ್ದಾರೆ.

 

ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಕ್ರಿಕೆಟ್ ಅಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ಜಿಂಬಾಬ್ವೆ ತಂಡಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಪೂಮ, ಜಿಂಬಾಬ್ವೆ ತಂಡದ ಪ್ರಯೋಜಕತ್ವಕ್ಕೆ ಮುಂದಾಗಿದ್ದು, ಅಭಿಮಾನಿಗಳ ಬೆಂಬಲಕ್ಕೆ ಆಲ್​ರೌಂಡರ್​ ರಿಯಾನ್ ಬರ್ಲ್​ ಧನ್ಯವಾದ ತಿಳಿಸಿದ್ದಾರೆ.

 

The post ಕ್ರಿಕೆಟಿಗನ ಭಾವನಾತ್ಮಕ ಟ್ವೀಟ್, ಜಿಂಬಾಬ್ವೆ ತಂಡಕ್ಕೆ ಶೂ ಕಂಪನಿಗಳ ಪ್ರಯೋಜಕತ್ವ..! appeared first on News First Kannada.

Source: newsfirstlive.com

Source link