2025ರ ಐಸಿಸಿ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದೆ. ಆದರೀಗ, ಭಾರತ ಈ ಟೂರ್ನಿಯಲ್ಲಿ ಭಾಗವಹಿಸುತ್ತಾ ಇಲ್ಲವೋ ಎಂಬುದರ ಬಗ್ಗೆ ಐಸಿಸಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಮಾತನಾಡಿದ್ದು, ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧ ಸುಧಾರಿಸಲು ಕ್ರಿಕೆಟ್ ಸಹಾಯ ಮಾಡಲಿದೆ ಎಂದಿದ್ದಾರೆ.
ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ತೊಂದರೆ ಇಲ್ಲ. ಪಾಕ್ ಐಸಿಸಿ ಟೂರ್ನಮೆಂಟ್ ಆಯೋಜಿಸಲು ಸಮರ್ಥವಾಗಿದೆ. ಮೊದಲ ಬಾರಿಗೆ ವಿಶ್ವದ ಟೂರ್ನಮೆಂಟ್ ಆಯೋಜನೆ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಕಾಲಾವಕಾಶವಿದೆ. ಕ್ರಿಕೆಟ್ಗಾಗಿ ಎರಡು ದೇಶಗಳು ಒಂದಾಗಲಿವೆ ಎಂದಿದ್ದಾರೆ.
The post ‘ಕ್ರಿಕೆಟ್ಗಾಗಿ ಭಾರತ, ಪಾಕ್ ಒಂದಾಗಲಿದೆ’- ICC appeared first on News First Kannada.