ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್ ದೃಢವಾಗಿದೆ.

ಚಿಕ್ಕಮಗಳೂರಿನ ಕಡೂರಿನ ವೇದ ಕೃಷ್ಣಮೂರ್ತಿ ಅವರ ತಾಯಿ ಕೋವಿಡ್ ಸೋಂಕಿನಿಂದಾಗಿ ಶುಕ್ರವಾರ ಮೃತಪಟ‍್ಟಿದ್ದರು.

ಇದನ್ನೂ ಓದಿ:ಮಾಸ್ಕ್ ಧರಿಸದ ಉಡುಪಿ ಡಿಸಿ ಮೇಲೆ ಜನಾಕ್ರೋಶ : ಜಗದೀಶ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

ಬೆಂಗಳೂರಿನಲ್ಲೇ ವೇದಾ ಕೃಷ್ಣಮೂರ್ತಿ ಕುಟುಂಬದವರಿಗೆ ಪಾಸಿಟಿವ್ ಬಂದಿತ್ತು. ವೇದಾ ಅವರ ತಂದೆ, ಅಣ್ಣ-ಅತ್ತಿಗೆ, ಅಕ್ಕನಿಗೂ ಕೋವಿಡ್ ಸೋಂಕು ದೃಢವಾಗಿತ್ತು. ಕುಟುಂಬದವರಿಗೆ ಸೋಂಕು ತಗುಲಿದ್ದರೂ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿಕ್ಕಮಗಳೂರು ಡಿಹೆಚ್ಒ ಉಮೇಶ್ ಹೇಳಿದರು.

ಕಡೂರಿನಲ್ಲಿ ಶಿಷ್ಟಾಚಾರದ ಪ್ರಕಾರ ವೇದಾ ಕೃಷ್ಣಮೂರ್ತಿ ತಾಯಿ ಚೆಲುವಾಂಭರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ನಡೆಸಿದೆ.

ವೇದಾ ಕೃಷ್ಣಮೂರ್ತಿ ಅವರು 2011ರಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ.

ಕ್ರೀಡೆ – Udayavani – ಉದಯವಾಣಿ
Read More