ಕ್ರಿಕೆಟ್​ ಆಡಿ ಗಮನ ಸೆಳೆದ ಜಡ್ಜ್​​: ಕಾನೂನಿನ ರಕ್ಷಕರು ಗೂಟ ರಕ್ಷಕರಾದರು! ಸಿಬ್ಬಂದಿ ಜೊತೆ ಫೀಲ್ಡಿಗಿಳಿದು ಬ್ಯಾಟಿಂಗ್​ ಬೌಲಿಂಗ್! | Bangarpet Kannada association organised cricket match for judge and court staff in BEML Stadium in KGF


ಕ್ರಿಕೆಟ್​ ಆಡಿ ಗಮನ ಸೆಳೆದ ಜಡ್ಜ್​​: ಕಾನೂನಿನ ರಕ್ಷಕರು ಗೂಟ ರಕ್ಷಕರಾದರು! ಸಿಬ್ಬಂದಿ ಜೊತೆ ಫೀಲ್ಡಿಗಿಳಿದು ಬ್ಯಾಟಿಂಗ್​ ಬೌಲಿಂಗ್!

ಕ್ರಿಕೆಟ್​ ಆಡಿ ಗಮನ ಸೆಳೆದ ಜಡ್ಜ್​​: ಕಾನೂನಿನ ರಕ್ಷಕರು ಗೂಟ ರಕ್ಷಕರಾದರು! ಸಿಬ್ಬಂದಿ ಜೊತೆ ಫೀಲ್ಡಿಗಿಳಿದು ಬ್ಯಾಟಿಂಗ್​ ಬೌಲಿಂಗ್ ಮಾಡಿದರು!

ಅವರೆಲ್ಲಾ ನಿತ್ಯ ಕಾನೂನಿನ ರಕ್ಷಣೆಗಾಗಿ ಕಟಿಬದ್ದರಾಗಿರುವ ಕಾನೂನಿನ ರಕ್ಷಕರು ಹಾಗೂ ಕಾನೂನಿನ ಪಾಲಕರು, ಸಾಮಾನ್ಯವಾಗಿ ಅವರು ಹೊರಗೆ ಸಾಮಾನ್ಯ ಜನರ ನಡುವೆ ಕಾಣಸಿಗೋದೆ ಅಪರೂಪ, ಅಂತ ಅಪರೂಪದ ಕಾನೂನಿನ ರಕ್ಷಕರು ಮೈದಾನದಲ್ಲಿ ಕ್ರಿಕೆಟ್​ ಆಡುವ ಮೂಲಕ ವಿಭಿನ್ನವಾಗಿ ಕಂಡು ಬಂದರು.

ಎಲ್ಲರಲ್ಲಿ ಒಂದಾಗಿ ಕ್ರಿಕೆಟ್​ ಆಟಗಾರರಾಗಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದ ನ್ಯಾಯಾಧೀಶರು!
ಮೈದಾನದಲ್ಲಿ ಬೈಲಿಂಗ್​ನ್ನು ಎದುರಿಸುತ್ತಿರುವ ನ್ಯಾಯಾಲಯದ ಸಿಬ್ಬಂದಿಗಳು, ತಮ್ಮ ಸಿಬ್ಬಂದಿಗಳಿಗೆ ಮೈದಾನದಲ್ಲಿ ಕುಳಿತು ಹುರಿದುಂಬಿಸುತ್ತಿರುವ ನ್ಯಾಯಾಧಿಶರುಗಳು, ಮತ್ತೊಂದೆಡೆ ಮೈದಾನದಲ್ಲಿ ನ್ಯಾಯಾಂಗ ಇಲಾಖೆ ತಂಡದ ವಿರುದ್ದ ಬ್ಯಾಟ್​ ಬೀಸುತ್ತಿರುವ ಪೊಲೀಸ್​ ಹಾಗೂ ವಕೀಲರ ತಂಡ ಇಂಥಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್​ ನ ಬೆಮೆಲ್​ ಸ್ಟೇಡಿಯಂನಲ್ಲಿ. ಹೌದು ನ್ಯಾಯಾಧೀಶರು ಎಂದರೆ ಸಾಮಾನ್ಯವಾಗಿ ಜನರ ಮದ್ಯೆ ಕಾಣಸಿಗೋದು ತುಂಬಾ ಅಪರೂಪ. ಆದರೆ ಇವತ್ತು ಮಾತ್ರ ನ್ಯಾಯಾಧೀಶರು ಬೇರೆಯದೇ ರೀತಿಯಲ್ಲಿ ಕಂಡು ಬಂದರು. ಅದೂ ಕ್ರಿಕೆಟ್​ ಆಟಗಾರರ ಡ್ರೆಸ್​ನಲ್ಲಿ. ಹೌದು ಬಂಗಾರಪೇಟೆ ವಕೀಲರ ಸಂಘ, ಬಂಗಾರಪೇಟೆ ಕನ್ನಡ ಸಂಘದ ಪ್ರಾಯೋಜಕತ್ವದಲ್ಲಿ ಸಮ್ಮರ್​ ಕಪ್​ ಕ್ರಿಕೆಟ್​ ಉತ್ಸವ ಅನ್ನೋ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು ಕಾರ್ಯಕ್ರಮದಲ್ಲಿ ಕೋಲಾರ, ಮಾಲೂರು, ಕೆಜಿಎಫ್​ ಹಾಗೂ ಬಂಗಾರಪೇಟೆಯ ನ್ಯಾಯಾಲಯದ ನ್ಯಾಯಾಧೀಶರುಗಳು ಹಾಗೂ ಅವರ ಸಿಬ್ಬಂದಿಗಳು, ಹಾಗೂ ವಕೀಲರ ಸಂಘ, ಜೊತೆಗೆ ಕೆಜಿಎಫ್​ ಜಿಲ್ಲಾ ಪೊಲೀಸ್​ ಕ್ರಿಕೆಟ್​ ಟೂರ್ನಮೆಂಟ್​ ನಲ್ಲಿ ಭಾಗವಹಿಸಿತ್ತು. ಮುಂಜಾನೆಯಿಂದ ನಡೆದ ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.

ಪ್ರತಿನಿತ್ಯ ಕಾನೂನಿನ ರಕ್ಷಣೆಯಲ್ಲಿ ಕಟ್ಟುನಿಟ್ಟು ಫೀಲ್ಡ್​ನಲ್ಲಿ ಪುಲ್​ ಬ್ಯಾಟಿಂಗ್​ ಬೌಲಿಂಗ್!

Bangarpet Kannada association organised cricket match for judge and court staff in BEML Stadium

ಪ್ರತಿನಿತ್ಯ ಕಾನೂನಿನ ರಕ್ಷಣೆಯಲ್ಲಿ ಕಟ್ಟುನಿಟ್ಟು ಫೀಲ್ಡ್​ನಲ್ಲಿ ಪುಲ್​ ಬ್ಯಾಟಿಂಗ್​ ಬೌಲಿಂಗ್

ಪ್ರತಿನಿತ್ಯ ಕಾನೂನಿನ ರಕ್ಷಣೆಗಾಗಿ ತಮ್ಮ ಕರ್ತವ್ಯದಲ್ಲಿ ಮಗ್ನರಾಗುತ್ತಿದ್ದ ನ್ಯಾಯಾಲಯದ ಸಿಬ್ಬಂದಿ, ನ್ಯಾಯಾಧೀಶರು, ವಕೀಲರು ಇಂದು ಕ್ರಿಕೆಟ್​ ಆಟಗಾರರ ಡ್ರೆಸ್​ ತೊಟ್ಟು ಫೀಲ್ಡ್​ನಲ್ಲಿ ಬೆವರಿಳಿಸಿದರು. ಸುಡುವ ಬಿಸಿಲನ್ನು ಲೆಕ್ಕಿಸದೆ ಎಲ್ಲರೂ ಒಂದಾಗಿ ಖುಷಿ ಖುಷಿಯಾಗಿ ಕ್ರಿಕೆಟ್​ ಆಟವಾಡಿ ಸಂತಸ ಪಟ್ಟರು. ಸದಾ ಒತ್ತಡದಲ್ಲಿ ಕೆಲಸ ಮಾಡುವ ನ್ಯಾಯಾಂಗ ಇಲಾಖೆಯವರು ಸಾಮಾನ್ಯವಾಗಿ ಜನರ ಜೊತೆಗೆ ಬೆರೆಯೋದು ಕಡಿಮೆ ಆದರೆ ಅವರ ಒತ್ತಡದ ಜೀವನ ನಿವಾರಣೆಗೆ ಇಂಥ ಕ್ರೀಡೆಗಳು ಅನಿವಾರ್ಯ ಎಂದು ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಅಭಿಪ್ರಾಯಪಟ್ಟರು.

ಎಂಟು ತಂಡಗಳು ಗೆಲುವಿಗಾಗಿ ಎಲ್ಲಾ ತಂಡಗಳಿಂದಲೂ ಸೆಣೆಸಾಟ!
ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ಒಟ್ಟು ಏಳು ಜನ ನ್ಯಾಯಾಧೀಶರುಗಳು ಭಾಗವಹಿಸಿದ್ದರು, ಕೋಲಾರ, ಕೆಜಿಎಫ್​, ಬಂಗಾರಪೇಟೆ, ಮಾಲೂರು ನ್ಯಾಯಾಲಯದ ಸಿಬ್ಬಂದಿ ಹಾಗೂ ನ್ಯಾಯಾಧೀಶರ ಮೂರು ತಂಡಗಳು, ವಕೀಲರ ಸಂಘದ ಮೂರು ತಂಡಗಳು ಹಾಗೂ ಪೊಲೀಸ್​ ಇಲಾಖೆಯಿಂದ ಎರಡು ತಂಡ ಒಟ್ಟು ಎಂಟು ತಂಡಗಳು ಟೂರ್ನಮೆಂಟ್​ನಲ್ಲಿ ಭಾಗವಹಿಸಿದ್ದವು, ಅಂತಿಮವಾಗಿ ಕೋಲಾರ ನ್ಯಾಯಾಂಗ ಇಲಾಖೆಯ ತಂಡ ಎರಡನೇ ಸ್ಥಾನದಲ್ಲಿದ್ದರೆ ಕೆಜಿಎಫ್​ ನ್ಯಾಯಾಲಯದ ತಂಡ ಜಯಗಳಿಸಿತ್ತು. ಸುಡುವ ಬಿಸಿಲಲ್ಲೂ ಕೂಡಾ ಉತ್ಸಾಹ ಕಳೆದುಕೊಳ್ಳದೆ ಎಲ್ಲಾ ತಂಡಗಳು ಗೆಲುವಿಗಾಗಿ ಹರಸಾಹಸ ಪಟ್ಟರು, ಸೌಹಾರ್ದಯುತ ಟೂರ್ನಮೆಂಟ್​ನಲ್ಲಿ ಎಲ್ಲರೂ ತಮ್ಮ ಸ್ಥಾನ ಮಾನಗಳನ್ನು ಮರೆತು ಒಬ್ಬ ಕ್ರೀಡಾಪಟುವಾಗಿ ಎಲ್ಲರ ಜೊತೆಗೆ ಬೆರೆತು ಆಟವಾಡಿದ್ದು ಮೆಚ್ಚುವಂತಹದ್ದು ಎಂದು ಆಯೋಜಕರು ಹಾಗೂ ಬಂಗಾರಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಪಲ್ಲವಿ ಮಣಿ ಅಭಿಪ್ರಾಯಪಟ್ಟರು.

ಒಟ್ಟಾರೆ ನ್ಯಾಯಾಧೀಶರು ಅಂದರೆ ಅವರಿಗೆ ತಮ್ಮದೇ ಆದ ನಿರ್ಬಂಧಗಳಿರುತ್ತವೆ. ಅದರೆ ಒತ್ತಡದ ಬದುಕಿನಲ್ಲಿ ತಮಗೂ ಹಾಗೂ ಸಿಬ್ಬಂದಿಗೂ ಒಂದಷ್ಟು ದೈಹಿಕ ಹಾಗೂ ಮಾನಸಿಕ ಸಂತೋಷ ಸಿಗಲಿ ಅನ್ನೋ ನಿಟ್ಟಿನಲ್ಲಿ ನ್ಯಾಯಾಧೀಶರ ಈ ನಡೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
-ರಾಜೇಂದ್ರ ಸಿಂಹ

TV9 Kannada


Leave a Reply

Your email address will not be published. Required fields are marked *