ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್​ಮನ್ ಲಿಯಾಮ್ ಲಿವಿಂಗ್​ಸ್ಟೋನ್, ಬಿಗ್ಗೆಸ್ಟ್ ಸಿಕ್ಸರ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೆಡಿಂಗ್ಲಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ 2ನೇ ಟಿ-ಟ್ವೆಂಟಿ ಪಂದ್ಯದ ವೇಳೆ, ಲಿವಿಂಗ್​ಸ್ಟೋನ್ ಈ ಸಾಧನೆ ಮಾಡಿದ್ದಾರೆ. ಪಾಕ್​​ ವೇಗಿ ಹ್ಯಾರಿಸ್ ರೌಫ್​ ತನ್ನ ಎರಡನೇ ಸ್ಪೆಲ್​ನಲ್ಲಿ ಬೌಲಿಂಗ್​​ ಮಾಡಲು ಆಗಮಿಸಿದ್ರು. ಆಗ ರೌಫ್ ಎಸೆತದ ಫುಲ್​ಲೆಂಥ್ ಬಾಲನ್ನ ಲಿವಿಂಗ್​ಸ್ಟೋನ್, ನೇರವಾಗಿ ಕ್ರೀಡಾಂಗಣದಿಂದ ಆಚೆ ಸಿಕ್ಸರ್ ಬಾರಿಸೋ ಮೂಲಕ, ಕ್ರಿಕೆಟ್​ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ರು. ಲಿವಿಂಗ್​ಸ್ಟೋನ್ ಸಿಕ್ಸರ್​​ ಕಂಡು ಬೆರಗಾದ ಕಾಮೆಂಟೇಟರ್ಸ್​, ಇದು ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್​ ಅಂತ ಬಣ್ಣಿಸಿದ್ರು. ​

The post ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ರಾ ಇಂಗ್ಲೆಂಡ್ ಬ್ಯಾಟ್ಸ್​ಮನ್..? appeared first on News First Kannada.

Source: newsfirstlive.com

Source link