ನ್ಯೂಜಿಲೆಂಡ್ ವಿರುದ್ಧದ ಸರಣಿ ಆರಂಭಗೊಂಡಿದ್ದಾಗಿದೆ. 2 ಪಂದ್ಯಗಳ ಟೆಸ್ಟ್ ಸರಣಿಗೂ, ಈಗಿನಿಂದಲೇ ತಯಾರಿಯನ್ನೂ ನಡೆಸ್ತಿದ್ದಾರೆ. ನಾಯಕನಾಗಿ ರಹಾನೆ, ಉಪ ನಾಯಕನಾಗಿ ಚೇತೇಶ್ವರ್ ಪೂಜಾರ ಮುನ್ನಡೆಸಲಿದ್ದಾರೆ. ಇದು ಕ್ರಿಕೆಟ್ ಪಂಡಿತರಿಗೆ ನಿಜಕ್ಕೂ ಶಾಕಿಂಗ್ ವಿಚಾರ.
ಟೆಸ್ಟ್ ಸರಣಿಗೆ ತಂಡ ಪ್ರಕಟಕ್ಕೂ ಮುನ್ನ ಹಾಗೂ ಇಂಗ್ಲೆಂಡ್ ಸರಣಿ ವೇಳೆ ಕ್ರಿಕೆಟ್ ಪಂಡಿತರು ರಹಾನೆ, ಪೂಜಾರಗೆ ಇಂಗ್ಲೆಂಡ್ ಸರಣಿಯೇ ಕೊನೆಯ ಸರಣಿ ಅಂತಾನೇ ವಿಶ್ಲೇಷಣೆ ಮಾಡಿದ್ದರು. ಅಷ್ಟೇ ಅಲ್ಲ.. ಸೆಲೆಕ್ಷನ್ ಕಮಿಟಿಯೂ ಕೈಬಿಡುವ ನಿರ್ಧಾರಕ್ಕೆ ಬಂದಿತ್ತು. ಆದ್ರೆ ಮತ್ತೆ ವೈಟ್ ಜರ್ಸಿಯಲ್ಲಿ ನಾಯಕ ಮತ್ತು ಉಪನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹಿಂದೆ, ಓರ್ವ ವ್ಯಕ್ತಿ ಇದ್ದಾರೆ.
ಅಜಿಂಕ್ಯಾ ರಹಾನೆ, ಪೂಜಾರ ಬೆನ್ನಿಗೆ ನಿಂತ ದ್ರಾವಿಡ್..!
ಟೀಮ್ ಇಂಡಿಯಾದ ಆಪದ್ಭಾಂದವರಾಗಿದ್ದ ರಹಾನೆ, ಪೂಜಾರ ಅಸ್ಥಿರ ಪ್ರದರ್ಶನದಿಂದ, ಆಪತ್ತಿಗೆ ಸಿಲುಕಿದ್ದರು. ಆಸ್ಟ್ರೇಲಿಯಾ ಸರಣಿಯಲ್ಲಿ ನಾಯಕನಾಗಿ ತಂಡವನ್ನ ಉತ್ತಮವಾಗಿ ಮುನ್ನಡೆಸಿದ್ದ ರಹಾನೆ, ಬ್ಯಾಟ್ನಿಂದ ಹೇಳಿಕೊಳ್ಳುವಷ್ಟು ಪ್ರದರ್ಶನವನ್ನೇನು ನೀಡಿರಲಿಲ್ಲ. ನಂತರ ಇಂಗ್ಲೆಂಡ್ ನೆಲದಲ್ಲೂ ಕಂಪ್ಲೀಟ್ ಫ್ಲಾಫ್ ಆಗಿದ್ದ ರಹಾನೆಗೆ, ಕೊನೆಯ ಸರಣಿಯೇ ಆಗಿತ್ತು. ಆದ್ರೆ ಈ ವೇಳೆ ರಹಾನೆಗೆ ಬೆನ್ನಲುಬಾಗಿ ನಿಂತಿದ್ದು, ಟೀಮ್ ಇಂಡಿಯಾ ನೂತನ ಕೋಚ್ ರಾಹುಲ್ ದ್ರಾವಿಡ್.
ರಹಾನೆಗೆ ಮಾತ್ರವಲ್ಲ.. ಅಸ್ಥಿರ ಪ್ರದರ್ಶನದಿಂದ ಕಂಗೆಟ್ಟಿದ್ದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಪರಿಸ್ಥಿತಿಯೂ ಇದೆ ಆಗಿತ್ತು. ಅಷ್ಟೇ ಅಲ್ಲ.. ಅಜಿಂಕ್ಯಾ ರಹಾನೆಗೆ ನಾಯಕತ್ವ ಪಟ್ಟಕಟ್ಟಿ, ಪೂಜಾರಗೆ ಉಪ ನಾಯಕನ ಜವಾಬ್ದಾರಿ ನೀಡಿದರು. ಆ ಮೂಲಕ ಭಾರತೀಯ ಕ್ರಿಕೆಟ್ನಲ್ಲಿ ಟಾಪ್ ಪರ್ಫಾಮರ್ಸ್ಗೆ ಹಾಗೂ ಅನುಭವಿಗಳಿಗೆ ಹೆಚ್ಚಿನ ಅದ್ಯತೆ ನೀಡುತ್ತೆ ಎಂಬ ಸಂದೇಶ ನೀಡಿದರು. ಈ ಜವಾಬ್ದಾರಿ ಜಸ್ಟ್ ಒಂದೇ ಒಂದು ಪಂದ್ಯಕ್ಕಾದರೂ, ಆಟಗಾರರು ಪಾಸಿಟಿವ್ ಮೂಡ್ಗೆ ಸ್ವಿಚ್ ಆನ್ ಆಗಿ, ಬೆಸ್ಟ್ ಪರ್ಫಾಮೆನ್ಸ್ ಹೊರಗಾಗುವಂತೆ ಮಾಡುತ್ತೆ ಅನ್ನೋದನ್ನ ಮರೆಯುವಂತಿಲ್ಲ.