ಕ್ರಿಕೆಟ್​  ಪ್ರೇಮಿಗಳಿಗೆ ಇಂದು ಡಬಲ್​ ಧಮಾಕಾ. ಡಬಲ್​ ಹೆಡ್ಡರ್​ ಫೈಟ್​​ಗಳಿಗೆ ದೆಹಲಿ ಹಾಗೂ ಅಹಮದಾಬಾದ್​ನಲ್ಲಿ ವೇದಿಕೆ ಸಿದ್ಧವಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ರಾಜಸ್ಥಾನ್​ ರಾಯಲ್ಸ್​ ತಂಡಗಳು ಮುಖಾಮುಖಿಯಾಗಲಿವೆ. 2ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​​ ಸೆಣೆಸಲಿವೆ.

ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಲು ಮುಂಬೈ ಸಜ್ಜು​
ಕಳೆದ ಪಂದ್ಯದಲ್ಲಿ ಮುಗ್ಗರಿಸಿರುವ ಮುಂಬೈ ಇಂಡಿಯನ್ಸ್​ ಇಂದು ಸಂಜು ಸ್ಯಾಮ್ಸನ್​ ಪಡೆಯನ್ನು ಮಣಿಸಿ ಜಯದ ಲಯಕ್ಕೆ ಮರಳುವ ತುಡಿತದಲ್ಲಿದೆ. ಇದಕ್ಕೆ ಇಶಾನ್​, ಡಿ ಕಾಕ್​, ಹಾರ್ದಿಕ್​, ಪೊಲಾರ್ಡ್​ರಂಥವರು ಲಯಕ್ಕೆ ಮರಳಬೇಕಾದ ಅಗತ್ಯವಿದೆ. ರೋಹಿತ್​ ಕೂಡ ಬಿಗ್​ ಇನ್ನಿಂಗ್ಸ್​ ಕಟ್ಟಬೇಕಿದೆ. ಬೌಲಿಂಗ್​ ವಿಭಾಗ ಉತ್ತಮ ಪ್ರದರ್ಶನ ನೀಡ್ತಾ ಇದ್ರೂ, ಆಲ್​ರೌಂಡರ್​ಗಳ ವೈಫಲ್ಯ ತಂಡಕ್ಕೆ ಮುಳುವಾಗಿದೆ.

ಬಲಿಷ್ಠ ಮುಂಬೈಯನ್ನ ಮೆಟ್ಟಿ ನಿಲ್ಲುತ್ತಾ ಯಂಗ್ ರಾಜಸ್ಥಾನ್?
ಕಳೆದ ಪಂದ್ಯದಲ್ಲಿ ಕೆಕೆಆರ್​ ಎದುರು ಗೆದ್ದಿರುವ ಸಂಜು ಪಡೆ, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ಗಳ ವೈಫಲ್ಯ ತಂಡಕ್ಕೆ ಹಿನ್ನಡೆಯಾಗಿದೆ. ಆಲ್​ರೌಂಡರ್​​ಗಳ ಪ್ರದರ್ಶನವೂ ಅಷ್ಟಕಷ್ಟೇ. ಬೌಲಿಂಗ್​​ನಲ್ಲಿ ಸಕಾರಿಯಾ ಪರವಾಗಿಲ್ಲ ಎನಿಸಿಕೊಂಡ್ರೆ, ಉಳಿದವರು ಮಾತ್ರ ವಿಕೆಟ್​ ಕಬಳಿಸೋಕೆ ಪರದಾಡ್ತಿದ್ದಾರೆ. ಜೊತೆಗೆ ಇಂದಿನ ಬಲಿಷ್ಠ ಮುಂಬೈಯನ್ನು ಎದುರಿಸಲು ಪ್ರದರ್ಶನದ ಜೊತೆಗೆ ತಂತ್ರಗಾರಿಕೆಗೆ ಕೂಡ ಆರ್​​ಆರ್​ ಪಡೆಗೆ ಅನಿವಾರ್ಯವಾಗಿದೆ.

ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಸ್ಪೈಡರ್​ ಪಂತ್​ ಕಣ್ಣು
ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್​ನಿಂದ ಪರಾಜಯಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​​ ಬೌನ್ಸ್​ಬ್ಯಾಕ್​​ ಮಾಡೋಕೆ ಸಿದ್ದವಾಗಿದೆ. ಬ್ಯಾಟಿಂಗ್ -ಬೌಲಿಂಗ್​​ನಲ್ಲಿ​​ ಸೂಪರ್​ ಡೂಪರ್​ ಪರ್ಫಾರ್ಮೆನ್ಸ್​ ಕೊಡ್ತಿರುವ ಡೆಲ್ಲಿ ಬಾಯ್ಸ್​, ಇಂದು KKR ವಿರುದ್ಧ ಪರಾಕ್ರಮ ಸಾಧಿಸಲು ರೆಡಿಯಾಗಿದೆ. ಸ್ಟಾರ್​ ಬೌಲರ್​ ರಬಾಡ ಇಂದು ಲಯ ಕಂಡುಕೊಂಡಿದ್ದೇ ಆದ್ರೆ, ಡೆಲ್ಲಿ ಪಾಳಯಕ್ಕೆ KKR ಮಣಿಸೋದು ಸುಲಭವಾಗಲಿದೆ.

ಗೆಲ್ಲಲೇಬೇಕಾದ ಒತ್ತಡದಲ್ಲಿ ನೈಟ್​ ರೈಡರ್ಸ್​​
ಹಿಂದಿನ ಪಂದ್ಯದಲ್ಲಿ ಪಂಜಾಬ್​ ಎದುರು ಗೆದ್ದಿರುವ ಕೆಕೆಆರ್​ ಈ ಪಂದ್ಯದಲ್ಲೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಬ್ಯಾಟಿಂಗ್​​ನಲ್ಲಿ ಟಿ20 ಸ್ಪೆಷಲಿಸ್ಟ್​ಗಳ ದಂಡೇ ಇದ್ರು ನೆನಪಿಗೆ ಬರುವ ಒಂದು ಪ್ರದರ್ಶನ ನೀಡಿಲ್ಲ. ಕಳೆದ ಪಂದ್ಯದಲ್ಲಿ ಮಾರ್ಗನ್​ ಫಾರ್ಮ್​ಗೆ ಮರಳಿದ್ದು ಸಮಾಧಾನಕರ ವಿಷಯವಾಗಿದೆ. ಆದ್ರೆ, ಡೆಲ್ಲಿ ಬ್ಯಾಟಿಂಗ್​​​ಗೆ ಕಡಿವಾಣ​ ಹಾಕಬೇಕೆಂದರೆ ಬೌಲಿಂಗ್​ ವಿಭಾಗ ಅದ್ಭುತ ಸ್ಪೆಲ್​​​ ಮಾಡಬೇಕಿದೆ. ಒಟ್ಟಿನಲ್ಲಿ ಲಾಕೌಡೌನ್​ನಿಂದಾಗಿ ಮನೆಯಲ್ಲೇ ಕೂತ ಅಭಿಮಾನಿಗಳು ಇಂದು ರಸದೌತಣದ ನಿರೀಕ್ಷೆಯಲ್ಲಿದ್ದಾರೆ.

The post ಕ್ರಿಕೆಟ್ ಪ್ರೇಮಿಗಳಿಗಿಂದು ಡಬಲ್​ ಧಮಾಕಾ- ಫ್ಯಾನ್ಸ್​ಗೆ ಸಿಗಲಿದೆ ಫುಲ್​​ ಎಂಟರ್​ಟೈನ್​ಮೆಂಟ್​ appeared first on News First Kannada.

Source: newsfirstlive.com

Source link