ಏಷ್ಯಾ ಕ್ರಿಕೆಟ್​​ ಕೌನ್ಸಿಲ್​​​ (ಎಸಿಸಿ) 2021ರ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯನ್ನು 2023ಕ್ಕೆ ಮುಂದೂಡಿದ್ದು, ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

2020ರಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಕಳೆದ ವರ್ಷ 2021ಕ್ಕೆ ಮುಂದೂಡಲಾಗಿತ್ತು. ಆದರೆ ಈ ವರ್ಷವೂ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಟೂರ್ನಿಯನ್ನು 2023ಕ್ಕೆ ಮುಂದೂಡಿ ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಕೋವಿಡ್​​ ಸೋಂಕಿನಿಂದ ಉಂಟಾಗುತ್ತಿರುವ ಅಪಾಯ ಹಾಗೂ ನಿರ್ಬಂಧಗಳ ಹಿನ್ನೆಲೆಯಲ್ಲಿ ಎಸಿಸಿ ಕಠಿಣ ನಿರ್ಣಯವನ್ನು ಮಾಡಿದ್ದು, 2020ರ ಏಷ್ಯಾ ಕಪ್​ ಟೂರ್ನಿಯನ್ನು 2023ಕ್ಕೆ ಮುಂದೂಡಿದೆ. ಎಸಿಸಿ ತನ್ನ ಸ್ಟಾಕ್​ ಹೋಲ್ಡರ್ಸ್​​ ಹಾಗೂ ಭಾಗವಹಿಸುವ ತಂಡಗಳೊಂದಿಗೆ ನಿರಂತರವಾಗಿ ಕೆಲಸ ಮಾಡಲಿದ್ದು, ನಿಗದಿತ ವರ್ಷದಲ್ಲಿ ಟೂರ್ನಿಯನ್ನು ನಡೆಯುವಂತೆ ಪ್ರಯತ್ನಿಸುತ್ತದೆ. 2022ರಲ್ಲಿ ಈಗಾಗಲೇ ಏಷ್ಯಾ ಕಪ್ ನಿಗದಿ ಆಗಿರುವುದರಿಂದ 2023ರಲ್ಲಿ ಈ ಆವೃತ್ತಿಯನ್ನು ನಡೆಸಲು ಸಾಧ್ಯವಿದೆ ಎಂದು ಎಸಿಸಿ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

The post ಕ್ರಿಕೆಟ್ ಫ್ಯಾನ್ಸ್​​ಗೆ ಮತ್ತೊಂದು ಆಘಾತ: ಏಷ್ಯಾ ಕಪ್​ ಕ್ರಿಕೆಟ್ ಟೂರ್ನಿ 2023ಕ್ಕೆ ಮುಂದೂಡಿಕೆ appeared first on News First Kannada.

Source: newsfirstlive.com

Source link