ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಬಂಧನ; 6 ಲಕ್ಷ ನಗದು, ಮೊಬೈಲ್ ಪೊಲೀಸ್ ವಶಕ್ಕೆ | CCB police arrest man who involved in cricket betting at Bengaluru


ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಬಂಧನ; 6 ಲಕ್ಷ ನಗದು, ಮೊಬೈಲ್ ಪೊಲೀಸ್ ವಶಕ್ಕೆ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ(Betting) ತೊಡಗಿದ್ದ ಆರೋಪಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಸೆರೆ ಸಿಕ್ಕಿದ್ದಾನೆ. ಸಿಸಿಬಿ ಪೊಲೀಸರು ಟಿ ಟ್ವೆಂಟಿ ಕ್ರಿಕೆಟ್ ಫೈನಲ್ ಪಂದ್ಯದ ಜೂಜಾಟ ಆಡುತ್ತಿದ್ದ ಹೇಮಂತ್​ನನ್ನು ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ನಗದು ಹಾಗೂ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯನಗರದ ಆರ್​ಪಿಸಿ ಲೇಔಟ್ ಬಳಿ ಮೊಬೈಲ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಆಡಿಸುತ್ತಿದ್ದ ಆರೋಪಿ ಸದ್ಯ ಪೊಲೀಸ್​ ಅತಥಿಯಾಗಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ರೈತರ ಹೊಲದಲ್ಲಿ ಪಂಪಸೆಟ್ ಕಳ್ಳತನ ಮಾಡುತ್ತಿದ್ದವರು ಲಾಕ್
ರೈತರ ಹೊಲದಲ್ಲಿ ಪಂಪ್‌ಸೆಟ್ ಕಳ್ಳತನ ಮಾಡುವಾಗ ರೆಡ್‌ಹ್ಯಾಂಡಾಗಿ ಕಳ್ಳರು ಗ್ರಾಮಸ್ಥರ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ನಾಗಲದಿನ್ನಿ ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ್ದಾರೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ದುಶ್ಚಟಗಳ ದಾಸನಾಗಿರುವ ಭಿಕ್ಷುಕ ತಂದೆಯಿಂದ ಹೆಣ್ಣು ಮಗು ಮಾರಾಟ, ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸ್

Nisha Dahiya Murder: ಸೋನಿಪತ್​ನಲ್ಲಿ ಕುಸ್ತಿಪಟು ನಿಶಾ ದಹಿಯಾ ಕೊಲೆ ಪ್ರಕರಣ; ಕೋಚ್ ಪವನ್ ಸೇರಿ ಆರೋಪಿಗಳ ಬಂಧನ

TV9 Kannada


Leave a Reply

Your email address will not be published. Required fields are marked *