ಕ್ರಿಕೆಟ್ ಲೋಕದಲ್ಲಿ ಕೊಹ್ಲಿ ಹಾಟ್​​ ಟಾಪಿಕ್; DRS ಡ್ರಾಮಾದಲ್ಲಿ ಕೊಹ್ಲಿ ವರ್ತನೆ ಸರೀನಾ? ತಪ್ಪಾ?


ಕೇಪ್​ ಟೌನ್​ ಟೆಸ್ಟ್​ ಪಂದ್ಯದ ಫಲಿತಾಂಶದ ಹೊರತಾಗಿ 3ನೇ ದಿನ ಆನ್​ ಫೀಲ್ಡ್​ನಲ್ಲಿ ವಿರಾಟ್​ ಕೊಹ್ಲಿ ನಡೆದುಕೊಂಡ ರೀತಿ ಹಾಟ್​ ಸುದ್ದಿಯಾಗ್ತಿದೆ. ಡಿಆರ್​​ಎಸ್​ ಡ್ರಾಮಾದಲ್ಲಿ ಕೊಹ್ಲಿಯ ವರ್ತನೆ ಸರೀನಾ..? ತಪ್ಪಾ..? ಎಂಬ ಬಗ್ಗೆ ತೀವ್ರ ಚರ್ಚೆಯಾಗ್ತಿದೆ. ಅಷ್ಟಕ್ಕೂ ಆನ್​ ಫೀಲ್ಡ್​ನಲ್ಲಿ ಕೊಹ್ಲಿ ಮಾಡಿದ್ದೇನು? ಇಲ್ಲಿದೆ ನೋಡಿ ಡಿಟೇಲ್ಸ್.

ಇಂಡೋ-ಆಫ್ರಿಕನ್​ ಟೆಸ್ಟ್​ ಸರಣಿ ಅಂತ್ಯ ಕಂಡಿದ್ರೂ, ಚರ್ಚೆಗಳು ನಿಂತಿಲ್ಲ. ಅದರಲ್ಲೂ 3ನೇ ದಿನದಾಟದಲ್ಲಾದ ಡಿಆರ್​ಎಸ್​ ಡ್ರಾಮಾ ತೀವ್ರ ಚರ್ಚೆ ಹುಟ್ಟು ಹಾಕಿದೆ. ಟೀಮ್​ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ನಡೆದು ಕೊಂಡ ನಡೆ ಸರೀನಾ? ತಪ್ಪಾ? ಅನ್ನೋ ಪ್ರಶ್ನೆ ಹುಟ್ಟಿದೆ.

3ನೇ ದಿನದಾಟದ ಸೌತ್​ ಆಫ್ರಿಕಾ 2ನೇ ಇನ್ನಿಂಗ್ಸ್​ನ 21ನೇ ಓವರ್​ನಲ್ಲಿ ನಡೆದ ಘಟನೆಯಿದು. ಅಶ್ವಿನ್​ ಎಸೆದ 21ನೇ ಓವರ್​ನ 4 ಎಸೆತದಲ್ಲಿ ಆಫ್ರಿಕನ್​ ನಾಯಕ ಡೀನ್​ ಎಲ್ಗರ್​​ ಎಬಿ ಬಲೆಗೆ ಬೀಳ್ತಾರೆ. ಆನ್​ ಫೀಲ್ಡ್​ ಅಂಪೈಯರ್​​ ಮಾವ್ರೀಸ್​​ ಎರಾಸ್ಮಸ್​ ಔಟ್​ ಎಂದು ತೀರ್ಪನ್ನೂ ನೀಡ್ತಾರೆ. ಇದನ್ನ ಒಪ್ಪದ ಎಲ್ಗರ್​ ಡಿಆರ್​ಎಸ್​ ತೆಗೆದುಕೊಳ್ತಾರೆ. ಲೈನ್​ನಲ್ಲಿ ಬಿದ್ದ ಬಾಲ್​ ಒವರ್​ ದ ವಿಕೆಟ್​​ ಹಾದು ಹೋಗಿದ್ದು ಡಿಆರ್​​ಎಸ್​​ನಲ್ಲಿ ಕಂಡು ಬರುತ್ತೆ. ಹೀಗಾಗಿ 3ನೇ ಅಂಪೈರ್​​ ನಾಟ್​ ಔಟ್​ ಎಂದು ತೀರ್ಪು ನೀಡ್ತಾರೆ. ಇದು ಇಡೀ ಟೀಮ್​ ಇಂಡಿಯಾದ ಆಕ್ರೋಶಕ್ಕೆ ಕಾರಣವಾಗುತ್ತದೆ.

ಎಲ್ಗರ್​​ ಮಂಡಿಯ ಕೆಳಗೆ ತಾಗಿದ ಚೆಂಡು ಅಷ್ಟು ಎತ್ತರಕ್ಕೆ ಹೋಗೋದ್ದು ಸ್ವತಃ ಆನ್​ಪೀಲ್ಡ್​ ಅಂಪೈರ್​​ ಎರಾಸ್ಮಸ್​ರಲ್ಲೂ ಆಶ್ಚರ್ಯ ಹುಟ್ಟು ಹಾಕುತ್ತೆ. ಇಷ್ಟೇ ಅಲ್ಲ.. ಈ ತೀರ್ಪು ಟೀಂ​ ಇಂಡಿಯಾ ಆಟಗಾರರ ಪಿತ್ತವನ್ನ ನೆತ್ತಿಗೇರಿಸುತ್ತೆ. ಅಶ್ವಿನ್​, ರಾಹುಲ್​ ತಮ್ಮದೇ ಶೈಲಿಯಲ್ಲಿ ಅಸಮಾಧಾನ ಹೊರ ಹಾಕಿದ್ರೆ, ನಾಯಕ ವಿರಾಟ್​ ಕೊಹ್ಲಿ ತುಸು ಹೆಚ್ಚೇ ಆಕ್ರೋಶಗೊಳ್ತಾರೆ. ಇಷ್ಟೇ ಅಲ್ಲ. ಸ್ಟಂಪ್​ ಮೈಕ್​ ಬಳಿ ಬಂದು ಸೂಪರ್​ ಸ್ಪೋರ್ಟ್ಸ್​​ ಪ್ರೊಡಕ್ಷನ್​ ಟೀಮ್​ ವಿರುದ್ಧ ಖಾರವಾದ ಮಾತುಗಳನ್ನಾಡ್ತಾರೆ.

Image

ಕೊಹ್ಲಿಯ ಈ ವರ್ತನೆಯೇ ಇದೀಗ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಆಬನ್​ ಪೀಲ್ಡ್​ನಲ್ಲಿ ನಾಯಕನಾಗಿ ಕೊಹ್ಲಿ ಹೀಗೆ ಮಾಡಿದ್ದು ತಪ್ಪು ಎಂದು ಹಲವರು ಅಭಿಪ್ರಾಯ ಪಟ್ತಿದ್ದಾರೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕೂಡ ಕೊಹ್ಲಿ ವರ್ತನೆಯನ್ನ ಖಂಡಿಸಿದ್ದಾರೆ.

‘ರೋಲ್​ ಮಾಡೆಲ್​ ಆಗಲು ಸಾಧ್ಯವಿಲ್ಲ’
‘ಕೊಹ್ಲಿ ಒಬ್ಬ ಇಮ್ಯೆಚುರ್​​. ತಂಡದ ನಾಯಕನಾಗಿ ​ಸ್ಟಂಪ್​​ಮೈಕ್​ನಲ್ಲಿ ಈ ರೀತಿ ಹೇಳಿದ್ದು ಸರಿಯಲ್ಲ. ಈ ರೀತಿ ಮಾಡುವುದರಿಂದ ಯುವ ಆಟಗಾರರಿಗೆ ರೋಲ್​ ಮಾಡೆಲ್​ ಆಗಲು ಸಾಧ್ಯವಿಲ್ಲ’
ಗೌತಮ್​ ಗಂಭೀರ್​, ಮಾಜಿ ಕ್ರಿಕೆಟಿಗ

ಕೇವಲ ಈ ಒಂದು ಘಟನೆಯಿಂದ ಮಾತ್ರವಲ್ಲ.. ಈ ಹಿಂದೆಯೂ ಹಲವು ಬಾರಿ ವಿರಾಟ್​ ಕೊಹ್ಲಿ ವರ್ತನೆಯ ಬಗ್ಗೆ ಚರ್ಚೆಯಾಗಿವೆ. ಪ್ರತಿ ಬಾರಿಯೂ ಈ ವರ್ತನೆಯ ವಿರುದ್ಧ ಹಲವರು ಖಾರ ಪ್ರತಿಕ್ರಿಯೆಗಳನ್ನೇ ನೀಡ್ತಿದ್ದಾರೆ. ಮೈದಾನದಲ್ಲಿ ಅಗ್ರೆಸ್ಸೀವ್​ನೆಸ್​ ಬೇಕು ಎಂದು ಬಯಸಿದವರೂ ಹಲವರಿದ್ದಾರೆ. ಆದ್ರೆ, ಈ ಪರ-ವಿರೋದದ ಚರ್ಚೆಗಳತ್ತ ಗಮನ ಹರಿಸದ ಕೊಹ್ಲಿ, ತಮ್ಮ ಅಗ್ರೆಸ್ಸೀವ್​ ವರ್ತನೆಯನ್ನ ಡೇ ಒನ್​​ನಿಂದ ಈವರೆಗೂ ಮುಂದುವರೆಸಿಕೊಂಡೆ ಬಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *