ಕ್ರಿಕೆಟ್ ಶೋಕಿಯಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ಕ್ರಿಕೆಟಿಗ ರಾಜಗೋಪಾಲ್​ಗೇ ಫಿಕ್ಸಿಂಗ್ ಆಮಿಷವೊಡ್ಡಿದ್ದ ಆರೋಪಿ ಅರೆಸ್ಟ್! | Spot fixing offer to player Sathish Rajagopal case accused arrest in bengaluru


ಕ್ರಿಕೆಟ್ ಶೋಕಿಯಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ಕ್ರಿಕೆಟಿಗ ರಾಜಗೋಪಾಲ್​ಗೇ ಫಿಕ್ಸಿಂಗ್ ಆಮಿಷವೊಡ್ಡಿದ್ದ ಆರೋಪಿ ಅರೆಸ್ಟ್!

ಕ್ರಿಕೆಟಿಗ ಸತೀಶ್ ರಾಜಗೋಪಾಲ್ ಮತ್ತು ಆರೋಪಿ ಆನಂದ್

ಬೆಂಗಳೂರು: ಕ್ರಿಕೆಟಿಗ ಸತೀಶ್ ರಾಜಗೋಪಾಲ್​ಗೆ  ಫಿಕ್ಸಿಂಗ್ ಆಮಿಷ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಜಯನಗರ ಪೊಲೀಸರು ಆನಂದ್ ಕುಮಾರ್ ಎಂಬುವವರನ್ನು ಸೆರೆ ಹಿಡಿದಿದ್ದಾರೆ. ತಮಿಳುನಾಡು‌ ಕ್ರಿಕೆಟಿಗ ಸತೀಶ್ಗೆ ಇನ್ಸ್ಟಾಗ್ರಾಂ ಮೂಲಕ ಸಂದೇಶ ಕಳಿಸಿ TNPLನಲ್ಲಿ ಫಿಕ್ಸಿಂಗ್ನಲ್ಲಿ‌ ಭಾಗಿಯಾಗುವಂತೆ ಆಮಿಷವೊಡ್ಡಿದ್ದರು. ಸದ್ಯ ಈ ಪ್ರಕರಣ ಸಂಬಂಧಿಸಿ ಓರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳು ತಮಿಳುನಾಡಿನ ಐವರು ಆಟಗಾರರಿಗೆ ಫಿಕ್ಸಿಂಗ್ನಲ್ಲಿ‌ ಭಾಗಿಯಾಗುವಂತೆ ಆಮಿಷವೊಡ್ಡಿ ಮೆಸೆಜ್ ಕಳಿಸಿದ್ದರು. ಆ್ಯಂಟೋನಿ ದಾಸ್, ಸಂಜಯ್ ಯಾದವ್, ಅಶ್ವಿನ್ ಕ್ರಿಸ್ಟ್, ಎಂ ಸಿದ್ಧಾರ್ಥ್ ಗೆ ಮೆಸೆಜ್ ಮಾಡಿದ್ದರು. ಐವರ ಪೈಕಿ ಕ್ರಿಕೆಟಿಗ ಸತೀಶ್  ರಾಜಗೋಪಾಲ್ ಮಾತ್ರ ಆರೋಪಿಗಳ ಮೆಸೇಜ್ಗೆ ಪ್ರತಿಕ್ರಿಯಿಸಿದ್ದರು. ಬಳಿಕ ಆರೋಪಿಗಳು ಫಿಕ್ಸಿಂಗ್ ಆಮೀಷವೊಡ್ಡಿದಾಗ ಸತೀಶ್ ಬಿಸಿಸಿಐ ಗಮನಕ್ಕೆ ತಂದಿದ್ದರು.

ಸದ್ಯ ಜಯನಗರ ಪೊಲೀಸರು ಆರೋಪಿ ಆನಂದ್ ಕುಮಾರ್ನನ್ನು ಬಂಧಿಸಿದ್ದಾರೆ. ಸಾಲ ತೀರಿಸಲು ಅಡ್ಡ ದಾರಿ ಹಿಡಿದಿದ್ದ ಬಾಗೇಪಲ್ಲಿ‌ಯ ಆನಂದ್ ಕುಮಾರ್ ಅಲಿಯಾಸ್ ಬನ್ನಿ ಆನಂದ್, 9 ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದು ತಾಯಿ ಜೊತೆಗಿದ್ದ. ಡೆಲಿವರಿ ಬಾಯ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕ್ರಿಕೆಟ್ ಶೋಕಿಯಿಂದ 4-5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಕ್ರಿಕೆಟಿಗರ ಬ್ಲ್ಯಾಕ್ಮೇಲ್ ಮಾಡಲು ಪ್ಲ್ಯಾನ್ ಮಾಡಿಕೊಂಡು ಯೂಟ್ಯೂಬ್ನಲ್ಲಿ ಕ್ರಿಕೆಟಿಗರನ್ನ ವಂಚಿಸುವ ಬಗ್ಗೆ ಹುಡುಕಾಡಿ ಮಾಹಿತಿ ಕಲೆ ಹಾಕಿ ವಂಚನೆಗೆ ಮುಂದಾಗಿದ್ದಾನೆ. ಮೊದಲಿಗೆ ಕ್ರಿಕೆಟಿಗರಿಗೆ ಇನ್ಸ್ಟಾಗ್ರಾಂ ಮೂಲಕ ಫಿಕ್ಸಿಂಗ್ ಆಮಿಷವೊ ಬಳಿಕ ಅವರು ಪ್ರತಿಕ್ರಿಯಿಸಿದರೆ ಸ್ಕ್ರೀನ್ ಶಾಟ್ ತೆಗೆದುಕೊಂಡು ಅದರಿಂದ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಲು ಆರೋಪಿ ಆನಂದ್ ಪ್ಲ್ಯಾನ್ ಮಾಡಿದ್ದ. ಅದರಂತೆಯೇ 4-5 ಆಟಗಾರರಿಗೆ ಇನ್‌ಸ್ಟಾಗ್ರಾಂ ಮೂಲಕ ಮೆಸೇಜ್ ಕಳುಹಿಸಿದ್ದ. ಆದ್ರೆ ಅವನ ಪ್ಲ್ಯಾನ್ ಉಲ್ಟಾ ಹೊಡೆದಿದೆ. ಕ್ರಿಕೆಟಿಗ ರಾಜಗೋಪಾಲ್ ಸತೀಶ್ ಘಟನೆ ಸಂಬಂಧ ದೂರು ನೀಡಿ ಕೃತ್ಯಕ್ಕೆ ಅಂತ್ಯ ಹಾಡಿದ್ದಾರೆ.

ಘಟನೆ ಮಾಹಿತಿ
ಬನ್ನಿ ಆನಂದ್ ಎಂಬಾತ ತಮಿಳುನಾಡಿನ ಆಲ್‌ರೌಂಡರ್‌ ಆಟಗಾರ ಸತೀಶ್ ರಾಜಗೋಪಾಲ್‌ಗೆ ಫಿಕ್ಸಿಂಗ್ ಮಾಡಿಕೊಳ್ಳಲು ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದ. IPLನಲ್ಲಿ ಮುಂಬೈ, ಪಂಜಾಬ್, ಕೋಲ್ಕತ್ತಾ ಪರ ಆಡಿದ್ದ ತಮಿಳುನಾಡು ರಣಜಿ ತಂಡದ ಸದಸ್ಯನಾಗಿರುವ ಸತೀಶ್, ಮುಂಬರುವ TNPLನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಬನ್ನಿ ಆನಂದ್ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಆಫರ್ ನೀಡಿದ್ದ.

ಮುಂಬರುವ TNPL ನಲ್ಲಿ ಫಿಕ್ಸಿಂಗ್ ನಲ್ಲಿ‌ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್‌ಗೆ ಒಪ್ಪಿದ್ದಾರೆ. ನೀವು ಭಾಗಿಯಾದ್ರೆ ಪ್ರತಿ ಪಂದ್ಯಕ್ಕೆ ₹40 ಲಕ್ಷ ಆಫರ್ ಕೊಡ್ತೀವಿ ಎಂದು ಮೆಸೇಜ್ ಮಾಡಿದ್ದಾರೆ. ಆಟಗಾರ ಸತೀಶ್ ಆಫರ್ ತಿರಸ್ಕರಿಸಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದರು. ಸತೀಶ್ ಮಾಹಿತಿ ಆಧರಿಸಿ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

TV9 Kannada


Leave a Reply

Your email address will not be published. Required fields are marked *