ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚನೆ; 17 ಕೋಟಿ ರೂ ನಗದು, ಚಿನ್ನಾಭರಣ ಜಪ್ತಿ | The crypto currency is Fraud;17 crore cash, minor jewelery foreclosure


ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂ. ವಂಚನೆ; 17 ಕೋಟಿ ರೂ ನಗದು, ಚಿನ್ನಾಭರಣ ಜಪ್ತಿ

ಜಪ್ತಿಯಾದ ಹಣ ಮತ್ತು ಚಿನ್ನಾಭರಣ

ಬೆಂಗಳೂರು: ಕ್ರಿಪ್ಟೋ ಕರೆನ್ಸಿ (Crypto Currency) ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಿ ನಗದು, ಚಿನ್ನಾಭರಣ ಜಪ್ತಿ ಮಾಡಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ರೆಹಮ್ಮತ್ ಅಲಿ ಖಾನ್, ಇಮ್ರಾನ್ ರಿಯಾಜ್, ಜಭಿಉಲ್ಲಾ ಖಾನ್, ಶೀತಲ್ ಬೆಸ್ತವಾಡ್ ಬಂಧಿತರು. ಆರೋಪಿಗಳಿಂದ ಬರೋಬ್ಬರಿ 44 ಬ್ಯಾಂಕ್ ಅಕೌಂಟ್‌ನಲ್ಲಿದ್ದ 15 ಕೋಟಿ ನಗದು, 1ಕೆ.ಜಿ 650ಗ್ರಾಂ ಚಿನ್ನ, 78 ಲಕ್ಷ ನಗದು ಸೇರಿ 17 ಕೋಟಿ ರೂ. ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೊವಿಡ್ 2ನೇ ಲಾಕ್‌ಡೌನ್ ವೇಳೆ ಆನ್‌ಲೈನ್‌ನಲ್ಲಿ ಶೇರ್ ಶಾ ಅಪ್ಲಿಕೇಷನ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡೋದಾಗಿ ನಂಬಿಸಿ ಆರೋಪಿಗಳು ವಂಚಿಸಿದ್ದಾರೆ. ವಿವಿಧ ನೋಂದಾಯಿತ ಕಂಪನಿಗಳ ಮೂಲಕ ಹಣ ಹೂಡಿಕೆ ಮಾಡಿದ್ದು, ರಿಟರ್ನ್ಸ್‌, ಕ್ರಿಪ್ಟೋ ಮೈನಿಂಗ್ ಯಂತ್ರ ನೀಡದೆ ವಂಚಿಸಿದ್ರು. ಕಂಪನಿಗಳ ಸೀಲ್‌, ಮೊಬೈಲ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ 44 ಡಿಎಸ್‌ಸಿಯನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಿದರು.

ಚೈನೀಸ್‌ ಆ್ಯಪ್‌ಗಳ ಮೂಲಕ ವಂಚನೆ ಬಗ್ಗೆ ಸಿಸಿಬಿಗೆ ಮಾಹಿತಿ ತಿಳಿದಿದ್ದು, ಕೊವಿಡ್ ವೇಳೆ ನಾಲ್ವರು ಡೈರೆಕ್ಟರ್‌ಗಳನ್ನು ನೇಮಿಸಿಕೊಂಡಿದ್ರು. ಈ ನಾಲ್ವರ ಅಕೌಂಟ್‌ನಲ್ಲಿ 1 ಕೋಟಿಗೂ ಹೆಚ್ಚು ಹಣ ಜಪ್ತಿಯಾಗಿದೆ. ಸಾರ್ವಜನಿಕರಿಗೆ 44 ಕೋಟಿ ರೂಪಾಯಿ ವಂಚಿಸಿದ್ದರು. ಪ್ರಕರಣದ ಕಿಂಗ್‌ಪಿನ್‌ಗಳು ವಿದೇಶದಲ್ಲಿರುವ ಮಾಹಿತಿ ಇದ್ದು, ಕಂಪನಿಗಳಿಂದ ವಂಚನೆಗೊಳಗಾದವರು ದೂರು ನೀಡಿದ್ದಾರೆ. ಪ್ರಕರಣ ಭೇದಿಸಿದ ತಂಡಕ್ಕೆ 70 ಸಾವಿರ ನಗದು ಬಹುಮಾನ ನೀಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ದಾಳಿ ಮಾಡಲು ಬಂದವರಿಗೆ ಡ್ಯಾಗರ್​ನಿಂದ ಇರಿದು ಹಲ್ಲೆ:

ಬೆಂಗಳೂರು: ದಾಳಿ ಮಾಡಲು ಬಂದವರಿಗೆ ಡ್ಯಾಗರ್​ನಿಂದ ಇರಿದು ಹಲ್ಲೆ ಮಾಡಿರುವಂತಹ ಘಟನೆ ನಗರದ ಹೆಗ್ಗನಹಳ್ಳಿ ಕ್ರಾಸ್​ನಲ್ಲಿ ನಡೆದಿದೆ. ಮುನಿ ಎಂಬಾತನನ್ನ ಅಡ್ಡಗಟ್ಟಿ ಸೂರಿ, ನಟರಾಜ್ ಹಲ್ಲೆಗೆ ಯತ್ನಿಸಿದ್ದಾರೆ.​ ಈ ವೇಳೆ ಅವರ ಬಳಿಯಿದ್ದ ಡ್ಯಾಗರ್​ ಕಸಿದುಕೊಂಡು ದಾಳಿ ಮಾಡಿದ್ದಾರೆ. ಇದೇ ವೇಳೆ ಡ್ಯಾಗರ್​ನಿಂದ ಮುನಿ ಇರಿದಿದ್ದಾನೆ. ಗಂಭೀರ ಗಾಯಗೊಂಡಿರುವ ಸೂರಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಾಯಾಳು ನಟರಾಜ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನನ್ನ ಮೇಲೆ ದಾಳಿಗೆ ಯತ್ನಿಸಿದ್ದಕ್ಕೆ ಇರಿದಿರುವುದಾಗಿ ಮುನಿ ಹೇಳಿಕೆ ನೀಡಿದ್ದಾನೆ. ಈ ಹಿಂದೆಯೂ ಹಲ್ಲೆ ಪ್ರಕರಣದಲ್ಲಿ ಮುನಿ ಜೈಲುಪಾಲಾಗಿದ್ದ. ರಾಜಗೋಪಾಲನಗರ ಠಾಣೆ ಪೊಲೀಸರಿಂದ ಮುನಿ ವಿಚಾರಣೆ ನಡೆಯುತ್ತಿದೆ.

TV9 Kannada


Leave a Reply

Your email address will not be published. Required fields are marked *