WazirX ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ವಾಜಿರ್ಎಕ್ಸ್ ಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಇಡಿ ತನಿಖೆ ನಡೆಸುತ್ತಿದೆ ಎಂದು ವಿತ್ತ ಸಚಿವಾಲಯದ ರಾಜ್ಯಖಾತೆ ಸಚಿವ ಪಂಕಜ್ ಚೌಧರಿ ಅವರು ಸಂಸತ್ ನಲ್ಲಿ ತಿಳಿಸಿದ ಬೆನ್ನಲ್ಲೇ ಇಡಿ ಈ ಕ್ರಮ ಕೈಗೊಂಡಿದೆ.

ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ವಾಜಿರ್ಎಕ್ಸ್ ನಡೆಸುತ್ತಿರುವ ಜಾನಮೈ ಲ್ಯಾಬ್ ನಿರ್ದೇಶಕರಿಗೆ ಸೇರಿದ ಆಸ್ತಿಗಳ ಮೇಲೆ ಇಡಿ ಶೋಧ ನಡೆಸಿದ್ದು, 64.67 ಕೋಟಿ ಹಣವಿದ್ದ ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ. ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ವಾಜಿರ್ಎಕ್ಸ್ ಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಇಡಿ ತನಿಖೆ ನಡೆಸುತ್ತಿದೆ ಎಂದು ವಿತ್ತ ಸಚಿವಾಲಯದ ರಾಜ್ಯಖಾತೆ ಸಚಿವ ಪಂಕಜ್ ಚೌಧರಿ ಅವರು ಸಂಸತ್ ನಲ್ಲಿ ತಿಳಿಸಿದ ಬೆನ್ನಲ್ಲೇ ಇಡಿ ಈ ಕ್ರಮ ಕೈಗೊಂಡಿದೆ.