ಕ್ರಿಶ್ಚಿಯನ್ ಮಹಿಳೆ, ಮುಸ್ಲಿಂ ಡಿವೈಎಫ್‌ಐ ನಾಯಕನ ಅಂತರ್‌ಧರ್ಮೀಯ ಸಂಬಂಧದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿದ ಕೇರಳ ಹೈಕೋರ್ಟ್ | Kerala High Court declines to interfere with interfaith relationship of Christian woman Muslim DYFI leader Shejin


ಕ್ರಿಶ್ಚಿಯನ್ ಮಹಿಳೆ, ಮುಸ್ಲಿಂ ಡಿವೈಎಫ್‌ಐ ನಾಯಕನ ಅಂತರ್‌ಧರ್ಮೀಯ ಸಂಬಂಧದಲ್ಲಿ ಹಸ್ತಕ್ಷೇಪಕ್ಕೆ ನಿರಾಕರಿಸಿದ ಕೇರಳ ಹೈಕೋರ್ಟ್

ಶೆಜಿನ್ ಮತ್ತು ಜ್ಯೋತ್ಸ್ನಾ ಮೇರಿ ಜೋಸೆಫ್

ಕೊಚ್ಚಿ: ಮುಸ್ಲಿಂ ಡಿವೈಎಫ್‌ಐ (DYFI) ನಾಯಕನನ್ನು ಮದುವೆಯಾಗುವ ಕ್ರಿಶ್ಚಿಯನ್ ಮಹಿಳೆಯ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಕೇರಳ ಹೈಕೋರ್ಟ್ (Kerala High Court) ಮಂಗಳವಾರ ನಿರಾಕರಿಸಿದೆ. ಆಕೆಯ ಸಂಬಂಧಿಕರು ಇದು ಲವ್ ಜಿಹಾದ್(love jihad) ಎಂದು ಆರೋಪಿಸಿದ್ದು ಕೇರಳದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿದೆ. ತನ್ನನ್ನು ಯಾರೂ ಅಕ್ರಮವಾಗಿ ಬಂಧಿಸಿಲ್ಲ. ಪ್ರಸ್ತುತ ತನ್ನ ಕುಟುಂಬದೊಂದಿಗೆ ಮಾತನಾಡಲು ನಾನು ಇಚ್ಛಿಸುತ್ತಿಲ್ಲ ಎಂದು ಮಹಿಳೆ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಶೆಜಿನ್ (ಡಿವೈಎಫ್‌ಐ ನಾಯಕ) ಅವರನ್ನು ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದ್ದೇನೆ,  ಬಲವಂತದಿಂದ ಅಲ್ಲ ಎಂದು ಜ್ಯೋತ್ಸ್ನಾ ಮೇರಿ ಜೋಸೆಫ್ ಸ್ಪಷ್ಟವಾಗಿ ಹೇಳಿದ್ದಾರೆ ಅವರೊಂದಿಗೆ ಸಂವಾದ ನಡೆಸಿದ ನಂತರ ನ್ಯಾಯಮೂರ್ತಿಗಳಾದ ವಿ ಜಿ ಅರುಣ್ ಮತ್ತು ಸಿ ಎಸ್ ಸುಧಾ ಅವರ ಪೀಠವು ಹೇಳಿದೆ. ಈಗ ಆಕೆ ತನ್ನ ಹೆತ್ತವರು ಅಥವಾ ಕುಟುಂಬದೊಂದಿಗೆ ಸಂವಹನ ನಡೆಸಲು ಆಸಕ್ತಿ ಹೊಂದಿಲ್ಲ ಮತ್ತು ನಂತರದ ಹಂತದಲ್ಲಿ ಹಾಗೆ ಮಾಡುವುದಾಗಿ ಹೇಳಿದ್ದಾಳೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಮಹಿಳೆಯ ಕುಟುಂಬಕ್ಕೆ ತನ್ನ ಮದುವೆಯ ನಂತರ ಅವರನ್ನು ಭೇಟಿ ಮಾಡುವ ಉದ್ದೇಶವಿದೆ ಎಂದು ಅವರು ಹೇಳಿದರು. ಇದಕ್ಕಾಗಿ ವಿಶೇಷ ವಿವಾಹ ಕಾಯ್ದೆಯಡಿ ಅರ್ಜಿಯನ್ನು ಸಲ್ಲಿಸಿದ್ದು ಪರಿಗಣನೆಗೆ ಬಾಕಿ ಇದೆ ಮತ್ತು ಅದಕ್ಕಿಂತ ಮೊದಲು ಅಲ್ಲ ಎಂದು ನ್ಯಾಯಾಲಯ ಹೇಳಿದೆ. ನಿಮ್ಮ ಕಾಳಜಿ ಅರ್ಥಮಾಡಿಕೊಂಡಿದ್ದರೂ, ಅವರ ಮಗಳು ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿರುವ 26 ವರ್ಷದ ಮಹಿಳೆ ಮತ್ತು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಪೀಠವು ಕುಟುಂಬಕ್ಕೆ ತಿಳಿಸಿದೆ. “ಅವಳು ನಿರ್ಧಾರ ತೆಗೆದುಕೊಂಡಿದ್ದಾಳೆ ಮತ್ತು ಅವಳು ಹಿಂದೆ ಸರಿಯುತ್ತಿಲ್ಲ. ಇದು ಅವಳ ಇಚ್ಛೆ ಮತ್ತು ಖುಷಿ. ಅವಳು ಈಗ ತನ್ನ ಹೆತ್ತವರೊಂದಿಗೆ ಮಾತನಾಡಲು ಸಿದ್ಧಳಿಲ್ಲ, ಆದ್ದರಿಂದ ನಾವು ಅವಳನ್ನು ಹಾಗೆ ಮಾಡಲು ಒತ್ತಾಯಿಸುವುದು ಹೇಗೆ ಎಂದು ಅದು ಹೇಳಿದೆ.

ಮಹಿಳೆಯ ತಂದೆ ಜೋಸೆಫ್, ತನ್ನ ಮಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದು, ಅವಳನ್ನು ತನ್ನ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.

ತನ್ನ ಮಗಳು ತನ್ನ ಮನೆಯನ್ನು ತೊರೆದ ದಿನದಿಂದ ಅವಳು ಯಾರೊಂದಿಗೂ ಮಾತನಾಡಿಲ್ಲ ಮತ್ತು ಆದ್ದರಿಂದ, ಡಿವೈಎಫ್‌ಐ ನಾಯಕ ತನ್ನ ಇಚ್ಛೆಗೆ ವಿರುದ್ಧವಾಗಿ ಅವಳನ್ನು ನಿರ್ಬಂಧಿಸುತ್ತಿದ್ದಾನೆ ಎಂದು ಅನಿಸುತ್ತಿದೆ ಎಂದು ಜ್ಯೋತ್ಸ್ನಾ ಅವರ ಅಪ್ಪ ಜೋಸೆಫ್ ಸುದ್ದಿ ವಾಹಿನಿಯಲ್ಲಿ ಹೇಳಿದ್ದಾರೆ.
ಈ ವಿಷಯವನ್ನು ಪರಿಶೀಲಿಸಲು ಕೇರಳ ಪೊಲೀಸರಲ್ಲಿ ನಂಬಿಕೆಯ ಕೊರತೆಯಿದೆ ಮತ್ತು ಏನಾಯಿತು ಎಂಬುದನ್ನು ತನಿಖೆ ಮಾಡಲು ಸಿಬಿಐ ಅಥವಾ ಎನ್ಐಎಯಂತಹ ರಾಜ್ಯದ ಹೊರಗಿನ ಏಜೆನ್ಸಿಗೆ ಒಪ್ಪಿಸಬೇಕು ಎಂದು ಜೋಸೆಫ್ ಹೇಳಿದ್ದಾರೆ.

ಮಹಿಳೆಯ ಸಂಬಂಧಿಕರು “ಲವ್ ಜಿಹಾದ್” ಎಂದು ಆರೋಪಿಸಿದ ನಂತರ ಅಂತರ್ಧರ್ಮೀಯ ಸಂಬಂಧವು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತು.ಎಡ ಪಕ್ಷದ  ಹಿರಿಯ ನಾಯಕರೊಬ್ಬರು ಆರೋಪವನ್ನು ಬೆಂಬಲಿಸಿ, ನಂತರ ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಾಯಿತು. ನಂತರ ಸಿಪಿಐ(ಎಂ), ಅಂತರ್‌ಧರ್ಮೀಯ ವಿವಾಹಗಳಲ್ಲಿ ಅಸಹಜವಾದದ್ದೇನೂ ಇಲ್ಲ ಮತ್ತು ‘ಲವ್ ಜಿಹಾದ್’ ಅಭಿಯಾನವು ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಸೃಷ್ಟಿಯಾಗಿದೆ ಎಂದು ಸ್ಪಷ್ಟಪಡಿಸಿದೆ.  ಲವ್ ಜಿಹಾದ್ ಆರೋಪವನ್ನು ದಂಪತಿ ನಿರಾಕರಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *