ಹಾವೇರಿ: ಜಿಲ್ಲೆಯಲ್ಲಿ ರಕ್ಕಸ ಕೊರೊನಾ ತನ್ನ ಆರ್ಭಟ ಮುಂದುವರೆಸಿದೆ. ಗ್ರಾಮೀಣ ಭಾಗದ ಕುಟುಂಬಗಳಲ್ಲಿ ದಿನವೊಂದಕ್ಕೆ ಒಂದಿಲ್ಲೊಂದು ಪ್ರಾಣವನ್ನು ಕಿತ್ತುಕೊಳ್ಳುತ್ತಿದ್ದು, ಕೊರೊನಾಗೆ ಒಂದೇ ದಿನ ತಾಯಿ, ಮಗ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದಿದೆ.

ನಾಗರಾಜ್ ಬನ್ನಿಹಟ್ಟಿ ಹಾಗೂ ತಾಯಿ ಲಲಿತವ್ವ ಬನ್ನಿಹಟ್ಟಿ ಸಾವನ್ನಪ್ಪಿದ ಮೃತ ದುರ್ದೈವಿಗಳಾಗಿದ್ದಾರೆ. ಹೆಸ್ಕಾಂ ನೌಕರ ನಾಗರಾಜ್​ ಹಾಗೂ ಆತನ ತಾಯಿ ಸೋಂಕಿನಿಂದ ಮರಣಹೊಂದಿದ್ದಾರೆ. ಇದರಿಂದ ಗ್ರಾಮದಲ್ಲಿಯ ಜನರು ಬೆಚ್ಚಿಬಿದ್ದಿದ್ದು, ನಮ್ಮೂರಿಗೆ ಅಂಟಿಕೊಂಡಿರುವ ರೋಗ ದೂರ ಮಾಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಯಿ ಚಿಕಿತ್ಸೆ ಫಲಿಸಿದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಮಗ ದಾವಣಗೆರೆ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಮರಣ ಹೊಂದಿದ್ದಾನೆ. ಇಂದು ಗ್ರಾಮದ ಹೊರವಲಯದಲ್ಲಿ ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ತಾಯಿ, ಮಗ ತುಂಬಾ ಒಳ್ಳೆಯ ವ್ಯಕ್ತಿಗಳಾಗಿದ್ದರು. ಇವರಿಗೆ ಈ ಥರ ಸಾವು ಬರಬಾರದಿತ್ತು ಎಂದು ಗ್ರಾಮಸ್ಥರು ಮಮ್ಮಲು ಮರಗಿದ್ದಾರೆ.

 

 

The post ಕ್ರೂರಿ ಕೊರೊನಾ; ಒಂದೇ ದಿನ ತಾಯಿ, ಮಗ ಬಲಿ.. ಒಂದೇ ಚಿತೆಯಲ್ಲಿ ಅಂತ್ಯ ಸಂಸ್ಕಾರ appeared first on News First Kannada.

Source: newsfirstlive.com

Source link