ಧಾರವಾಡ: ಕೊರೊನಾ ಎರಡನೇ ತೀವ್ರತೆಗೆ ರಾಜ್ಯದ ಸರ್ಕಾರ ಜಾರಿ ಮಾಡಿರುವ ಲಾಕ್​ಡೌನ್​​ ಬ್ರೇಕ್​ ಹಾಕಿದೆ. ಆದರೆ ಕ್ರೂರಿ ಕೊರೊನಾ ಬಲಿ ಪಡೆಯುತ್ತಿರುವವ ಸಂಖ್ಯೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಈ ನಡುವೆ ಧಾರವಾಡ ತಾಲ್ಲೂಕಿನ ಮುಗದ ಗ್ರಾಮದಲ್ಲಿ ಕೊರೊನಾ ಮಹಾಮಾರಿಗೆ ಸಹೋದರರಿಬ್ಬರು ಬಲಿಯಾಗಿದ್ದಾರೆ.

ಗುಂಡುಕಲ್ಲಿನಂತೆ ದಷ್ಟಪುಷ್ಟವಾಗಿದ್ದ ಸುಬ್ಬಪ್ಪ ಭೋವಿ, ಬರಮಪ್ಪ ಭೋವಿ ಸಾವನ್ನಪ್ಪಿದ ಸಹೋದರರಾಗಿದ್ದಾರೆ. ಸುಬ್ಬಪ್ಪ ಭೋವಿ ಮೊದಲು ಕೊರೊನಾ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆ ಬಳಿಕ ಬರಮಪ್ಪನಿಗೂ ಕೊರೊನಾ ಸೋಂಕು ಧೃಡವಾಗಿತ್ತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಬರಮಪ್ಪ ಅವರು ಇಂದು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹಿರಿಯ ಜೀವಗಳನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ.

The post ಕ್ರೂರಿ ಕೊರೊನಾ; ಗುಂಡುಕಲ್ಲಿನಂತಿದ್ದ ಸೋದರರನ್ನು ಬಲಿ ಪಡೆದ ಕೋವಿಡ್​ appeared first on News First Kannada.

Source: newsfirstlive.com

Source link