ವಿಜಯನಗರ: ಬರೋಬ್ಬರಿ 38 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪಿಎಸ್​ಐ ಒಬ್ಬರು ತಮ್ಮ ನಿವೃತ್ತಿ ದಿನವೇ ಕೊರೊನಾದಿಂದಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಯಲ್ಲಪ್ಪ ಕದ್ರಳ್ಳಿ(60) ಸಾವನ್ನಪ್ಪಿದವರು.

ಯಲ್ಲಪ್ಪ ಕದ್ರಳ್ಳಿ ಹೊಸಪೇಟೆ ಪಟ್ಟಣ ಠಾಣೆ ಪಿಎಸ್​ಐ ಆಗಿ ಸೇವೆ ಸಲ್ಲಿಸುತ್ತಿದ್ದರು.. ಅವರು ಇಂದು ನಿವೃತ್ತಿ ಪಡೆಯಬೇಕಿತ್ತು. ಆದರೆ ನಿವೃತ್ತಿಯ ದಿನವೇ ಅವರು ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪಿಎಸ್‌ಐ ಯಲ್ಲಪ್ಪ 15 ದಿನಗಳಿಂದ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು.

The post ಕ್ರೂರಿ ಕೊರೊನಾ: ನಿವೃತ್ತಿ ಪಡೆದು ಹೊಸ ಇನ್ನಿಂಗ್ಸ್​ ದಿನವೇ ಬಲಿಯಾದ ಪಿಎಸ್​ಐ appeared first on News First Kannada.

Source: newsfirstlive.com

Source link