90ರ-2020ರ ದಶಕದ ಖ್ಯಾತ ನಿರ್ದೇಶಕ ಎಸ್​​.ಮಹೇಂದರ್​ ಕ್ರೇಜಿಸ್ಟಾರ್​ ರವಿಚಂದ್ರನ್​ಗೆ ಆ್ಯಕ್ಷನ್​ ಕಟ್​ ಹೇಳಲು ಸಜ್ಜಾಗ್ತಿದ್ದಾರೆ. ಅದೆಷ್ಟೋ ಸಿನಿಮಾಗಳನ್ನ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಎಸ್​.ಮಹೇಂದರ್​, ಇದೇ ಮೊದಲ ಬಾರಿಗೆ ರವಿಚಂದ್ರನ್​ ಜೊತೆ ಕೆಲಸ ಮಾಡಲಿದ್ದಾರೆ. ಹೌದು.. 32 ಸಿನಿಮಾಗಳನ್ನ ನಿರ್ದೇಶಿಸಿ, ಅನೇಕ ಹಿಟ್​ ಚಿತ್ರಗಳನ್ನ ನೀಡಿದ ಮಹೇಂದರ್​ ಇಲ್ಲಿಯವರೆಗೂ ರವಿಚಂದ್ರನ್​ಗೆ ಕತೆ ತಯಾರಿಸಿರಲಿಲ್ಲ.

ಸದ್ಯ ಈ ಜೋಡಿಯ ಚಿತ್ರಕ್ಕಾಗಿ ಕನ್ನಡ ಸಿನಿರಸಿಕರು ಕೂಡ ಎದುರು ನೋಡ್ತಿದ್ದಾರೆ. ಹಳ್ಳಿಯ ಸೊಗಡನ್ನ ತೋರಿಸೋದ್ರಲ್ಲಿ ಎಸ್​.ಮಹೇಂದರ್​ ನಿಸ್ಸೀಮರು. ಅದೇ ರೀತಿ ರವಿಚಂದ್ರನ್​ಗಾಗಿ ರೆಡಿ ಮಾಡಿರುವ ಕಥೆ ಕೂಡ ಹಳ್ಳಿ ಕಥೆಯನ್ನ ಹೊತ್ತು ಬರ್ತಿದೆ ಅಂತ ಹೇಳಲಾಗ್ತಿದೆ.

ಇದೀಗ ಜಾರಿಯಲ್ಲಿರುವ ಲಾಕ್​ಡೌನ್​ ಬಳಿಕ ಈ ಸಿನಿಮಾದ ಅಧಿಕೃತ ಅನೌನ್ಸ್​​ಮೆಂಟ್​ ಮಾಡಲಿದ್ದಾರೆ ನಿರ್ದೇಶಕ ಎಸ್​.ಮಹೇಂದರ್​. ಕೊರೊನಾ ಕಾರಣ ಸಿನಿಮಾದ ಕೆಲಸಗಳು ನಿಧಾನವಾಗಿರೋದು ಬಿಟ್ಟರೆ, ಮತ್ತೆಲ್ಲವೂ ರೆಡಿಯಾಗಿದೆ ಎನ್ನಲಾಗ್ತಿದೆ.

The post ಕ್ರೇಜಿಸ್ಟಾರ್​ಗೆ ಆ್ಯಕ್ಷನ್​ ಕಟ್​ ಹೇಳ್ತಾರಂತೆ ನಿರ್ದೇಶಕ ಎಸ್​.ಮಹೇಂದರ್​ appeared first on News First Kannada.

Source: newsfirstlive.com

Source link