ಕ್ರೇಜಿಸ್ಟಾರ್​ ‘ಕನ್ನಡಿಗ’ನಿಗೆ ಸಾಥ್​ ನೀಡಿದ ಶಿವಣ್ಣ

ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ನಿಂದಲೇ ಸೌಂಡ್ ಮಾಡುತ್ತಿರೋ ಸಿನಿಮಾ ”ಕನ್ನಡಿಗ”. ಕ್ರೇಜಿಸ್ಟಾರ್ ರವಿಚಂದ್ರನ್ ಅಪ್ಪಟ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸುತ್ತಿರೋ ನಿರೀಕ್ಷೆಯ ಸಿನಿಮಾ.ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ  ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಯಾಗಿದೆ. ಈ ಗ್ಯಾಪ್ ನಲ್ಲಿ ”ಕನ್ನಡಿಗ” ಕ್ರೇಜಿಸ್ಟಾರ್ ಗೆ  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಾಥ್ ನೀಡಿದ್ದಾರೆ. ಅಲ್ಲದೆ ತುಂಬಾ ದಿನಗಳ ನಂತರ ಕೋದಂಡರಾಮ ಮತ್ತೆ ಒಂದಾಗಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಬತ್ತಳಿಕೆಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ”ರವಿಬೋಪಣ್ಣ”, ”ದೃಶ್ಯ-2” , ”ಕನ್ನಡಿಗ” ಚಿತ್ರಗಳು ಶೂಟಿಂಗ್ ಮುಗಿಸಿ ತೆರೆ ಮೇಲೆ ಬರಲು ಸಜ್ಜಾಗಿವೆ. ಇತ್ತಿಚಿಗಷ್ಟೇ ”ದೃಶ್ಯಂ-”2 ಚಿತ್ರದ ಬಗ್ಗೆ  ಅಪ್ಡೇಟ್ ಕೊಟ್ಟಿದ್ದ ರವಿಮಾಮ, ಈಗ ಅಭಿಮಾನಿಗಳಿಗೆ ”ಕನ್ನಡಿಗ” ಚಿತ್ರದ ಕಡೆಯಿಂದ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ..

ಯೆಸ್..ಬಿಎಂ ಗಿರಿರಾಜ್ ನಿರ್ದೇಶನ ದಲ್ಲಿ ಮೂಡಿ ಬಂದಿರುವ ”ಕನ್ನಡಿಗ” ಚಿತ್ರದ ಪವರ್ ಪುಲ್ ಟೈಟಲ್ ಟ್ರಾಕ್ ಅನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ ”ಕನ್ನಡಿಗ” ಚಿತ್ರತಂಡ. ಇನ್ನು ಈ ಹಾಡನ್ನು ನ.1 ಕ್ಕೆ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿತ್ತು. ಅದ್ರೆ ಪವರ್ ಸ್ಟಾರ್ ನಮ್ಮನ್ನಗಲಿದ ಕಾರಣ ಕೊಂಚ ತಡವಾಗಿ ಹಾಡನ್ನು ರಿಲೀಸ್ ಮಾಡಿದ್ದಾರೆ.

”ಕನ್ನಡಿಗ” ಚಿತ್ರದ  ”ಸರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ  ಕನ್ನಡ ನಮ್ ಪಾಲ್ಗೆ” ಎಂಬ ಹಾಡು ಈಗ ಕೇಳುಗರನ್ನ ರೋಮಾಂಚನ ಮಾಡುತ್ತಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಸಾಹಿತ್ಯಕ್ಕೆ , ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಖತ್ ಎನರ್ಜಿಯಿಂದ ಹಾಡನ್ನು ಹಾಡುವ ಮೂಲಕ ಹಾಡಿನ ಗತ್ತನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ರವಿ ಬಸ್ರೂರ್ ಸಂಗೀತದ ಈ ಹಾಡಿನಲ್ಲಿ ರವಿಮಾಮ ಖಡಕ್ ಅಗಿ ಕಾಣಿಸಿದ್ದು, ರವಿಮಾಮನ”ಕನ್ನಡಗ”ನಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ತುಂಬಾ ಗ್ಯಾಪ್ ನ ನಂತ್ರ ”ಕನ್ನಡಿಗ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ”ಕೋದಂಡರಾಮ” ಮತ್ತೆ ಒಂದಾಗಿದ್ದಾರೆ. ರವಿಮಾಮನಾಯಕನಾಗಿ ಮಿಂಚಿದ್ರೆ..ಸೆಂಚುರಿ ಸ್ಟಾರ್ ಗಾಯಕನಾಗಿ ”ಕನ್ನಡಿಗ”ನಿಗೆ ಸಾಥ್ ನೀಡಿದ್ದಾರೆ. ಇನ್ನು ”ಕನ್ನಡಿಗ” ಚಿತ್ರ ಹೆಸರೇ ಹೇಳುವಂತೆ ಇದೊಂದು ”ಕನ್ನಡಿಗ”ನ ಕಥೆ ಹೇಳುತ್ತದೆ ಎಂಬುದು ಗೊತ್ತಾಗುತ್ತದೆ. ಇನ್ನು ರವಿಚಂದ್ರನ್, ಜೊತೆ  ”ರುದ್ರಿ” ಸಿನಿಮಾ ಖ್ಯಾತಿಯ ಪಾವನಾ ಜೋಡಿಯಾಗಿ ಕಾಣಿಸಿದ್ದಾರೆ.. ಇದರ ಜೊತೆಗೆ ಜೀವಿಕಾ, ಜಗದೀಶ್ ಮೈತ್ರಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ..ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿರುವ ”ಕನ್ನಡಿಗ” ಚಿತ್ರತಂಡ, ”ದೃಶ್ಯಂ 2”  ರಿಲೀಸ್ ನಂತ್ರ ”ಕನ್ನಡಿಗ”ನನ್ನು ಕನ್ನಡಿಗರಿಗೆ ಅರ್ಪಿಸೋಕೆ ಸಜ್ಜಾಗ್ತಿದ್ದಾರೆ.

News First Live Kannada

Leave a comment

Your email address will not be published. Required fields are marked *