ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು ನಿರೀಕ್ಷಿತ ‘ದೃಶ್ಯ2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ‘ದೃಶ್ಯ-2’ ಸಿನಿಮಾಗೆ ಹಾರರ್ ಸಿನಿಮಾಗಳ ಮೂಲಕ ಥ್ರಿಲ್ ಕೊಡುವ ಪಿ .ವಾಸು ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇನ್ನು ‘ದೃಶ್ಯ-2’ ಸಿನಿಮಾ ಮಲಯಾಳಂನಲ್ಲಿ ಬಂದ ‘ದೃಶ್ಯಂ-2’ ಸಿನಿಮಾದ ಮುಂದುವರೆದ ಭಾಗವಾಗಿದ್ದು, ಮಲಯಾಳಂ ಮತ್ತು ತೆಲುಗಿನಲ್ಲೂ ಸಹ ಪಿ. ವಾಸು ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಮೊದಲ ಭಾಗ, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ನಿರ್ಮಾಣವಾಗಿ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿತ್ತು.
ಕನ್ನಡದ ದೃಶ್ಯ ಸಿನಿಮಾದಲ್ಲಿದ್ದ ,ರವಿಚಂದ್ರನ್, ನವ್ಯಾ ನಾಯರ್ ತಾರಾಬಳಗದ ಜೊತೆ, ವರ್ಸಟೈಲ್ ಆ್ಯಕ್ಟರ್ ಅನಂತ್ ನಾಗ್ ಸಾಥ್ ನೀಡಿರುವುದು ಚಿತ್ರಕ್ಕೆ ಮತ್ತಷ್ಟು ಬಲಬಂದಂತಾಗಿದೆ. ಇನ್ನು ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ, ರವಿಚಂದ್ರನ್ಗೆ ಟಕ್ಕರ್ ಕೊಡಲು ಸಿದ್ಧವಾಗಿದ್ದಾರೆ. ಸಿನಿಮಾ ಡಿಸೆಂಬರ್ 10 ರಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.