ಕ್ರೈಂ: ನೈಟಿ ಹಾಕಿಕೊಂಡ ಬಂದು ಮಣಪ್ಪುರಂ ಫೈನಾನ್ಸ್​ ಕಂಪನಿ ಅಂಗಡಿ ದೋಚಲು ಯತ್ನಿಸಿದ್ದವರ ಸೆರೆ, ಬೈಕ್​ಗಳ ಡಿಕ್ಕಿ-ದಂಪತಿ ಸೇರಿ ಮೂವರ ಸಾವು | Manappuram Finance company attempt to theft case 3 persons arrested by Rajagopal Nagar police


ಕ್ರೈಂ: ನೈಟಿ ಹಾಕಿಕೊಂಡ ಬಂದು ಮಣಪ್ಪುರಂ ಫೈನಾನ್ಸ್​ ಕಂಪನಿ ಅಂಗಡಿ ದೋಚಲು ಯತ್ನಿಸಿದ್ದವರ ಸೆರೆ, ಬೈಕ್​ಗಳ ಡಿಕ್ಕಿ-ದಂಪತಿ ಸೇರಿ ಮೂವರ ಸಾವು

ಪ್ರಾತಿನಿಧಿಕ ಚಿತ್ರ

ಈ ಮೂವರೂ ಪಾತಕಿಗಳು ಮೇ 26ರಂದು ಮಣಪ್ಪುರಂ ಫೈನಾನ್ಸ್​ನಲ್ಲಿ ದೋಚಲು ಯತ್ನಿಸಿದ್ದರು. ಗ್ಯಾಸ್​ ಕಟರ್​ನಿಂದ ರೋಲಿಂಗ್ ಶೆಟರ್​​ ಕತ್ತರಿಸಿ ಒಳಗೆ ನುಗ್ಗಿದ್ದರು. ಸೈರನ್​ ಮೊಳಗಿದ ಹಿನ್ನೆಲೆಯಲ್ಲಿ ಭೀತಿಗೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಗಮನಾರ್ಹವೆಂದರೆ ಗುರುತು ಸಿಗಬಾರದೆಂದು ನೈಟಿ ಹಾಕಿಕೊಂಡು ಬಂದಿದ್ದರು.

ಬೆಂಗಳೂರು: ಬೆಂಗಳೂರಿನ ರಾಜಗೋಪಾಲನಗರದಲ್ಲಿ ಗುರುತುಸಿಗಬಾರದೆಂದು ನೈಟಿ ಹಾಕಿಕೊಂಡ ಬಂದು ಮಣಪ್ಪುರಂ ಫೈನಾನ್ಸ್​ ಕಂಪನಿಯ ಅಂಗಡಿ ದೋಚಲು ಯತ್ನಿಸಿದ್ದವರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ರಾಜಗೋಪಾಲನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಾಗರಾಜ್, ಕುಮಾರ್ ಮತ್ತು ಬಹದ್ದೂರ್ ಸಿಂಗ್ ಬಂಧಿತರು.

ಈ ಮೂವರೂ ಪಾತಕಿಗಳು ಮೇ 26ರಂದು ಮಣಪ್ಪುರಂ ಫೈನಾನ್ಸ್​ನಲ್ಲಿ ದೋಚಲು ಯತ್ನಿಸಿದ್ದರು. ಗ್ಯಾಸ್​ ಕಟರ್​ನಿಂದ ರೋಲಿಂಗ್ ಶೆಟರ್​​ ಕತ್ತರಿಸಿ ಒಳಗೆ ನುಗ್ಗಿದ್ದರು. ಸೈರನ್​ ಮೊಳಗಿದ ಹಿನ್ನೆಲೆಯಲ್ಲಿ ಭೀತಿಗೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಗಮನಾರ್ಹವೆಂದರೆ ಗುರುತು ಸಿಗಬಾರದೆಂದು ನೈಟಿ ಹಾಕಿಕೊಂಡು ಬಂದಿದ್ದ ಈ ಗ್ಯಾಂಗ್, ಈ ಹಿಂದೆ ಎಟಿಎಂ ಯಂತ್ರ ಕಳ್ಳತನಕ್ಕೆ ಯತ್ನಿಸಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

2 ಬೈಕ್​ಗಳ ನಡುವೆ ಡಿಕ್ಕಿ: ದಂಪತಿ ಮತ್ತು ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಾವು

ರಾಯಚೂರು: 2 ಬೈಕ್​ಗಳ ನಡುವೆ ಡಿಕ್ಕಿಯಾಗಿ, ದಂಪತಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಜಕ್ಕಳದಿನ್ನಿ ಬಳಿ ಈ ದುರಂತ ನಡೆದಿದೆ. ವಿರೂಪಾಕ್ಷಪ್ಪಗೌಡ(45), ಪತ್ನಿ ಮಲ್ಲಮ್ಮ(38) ಮತ್ತು ಹಟ್ಟಿ ಚಿನ್ನದ ಗಣಿ ಕಾರ್ಮಿಕ ಮೃತಪಟ್ಟವರು. ಮೃತ ದಂಪತಿ ಮಾನ್ವಿ ತಾಲೂಕಿನ ಮಲದಗುಡ್ಡದ ನಿವಾಸಿಗಳು. ಮತ್ತೊಂದು ಬೈಕ್​ನಲ್ಲಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಓವರ್​ಟೇಕ್ ಮಾಡಲು ಹೋಗಿ 2 ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published. Required fields are marked *