ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ಮೋಸ್ಟ್​ ಎಕ್ಸ್​​​ಪೆಕ್ಟೆಡ್​​ ಸಿನಿಮಾ ಕೆಜಿಎಫ್​ ಚಾಪ್ಟರ್​ 2. ಈಗಾಗಲೇ ಸಿನಿಮಾದ ಚಿತ್ರೀಕರಣ ಕಂಪ್ಲೀಟ್​ ಆಗಿದ್ದು, ಪೋಸ್ಟ್​​ ಪ್ರೊಡಕ್ಷನ್​ ಹಂತದಲ್ಲಿದೆ. ಈಗಾಗಲೇ ಕೆಜಿಎಫ್​ 2 ಸಿನಿಮಾದ ಒಂದಷ್ಟು ಪಾತ್ರಗಳ ಲುಕ್​ ರಿವೀಲ್​ ಆಗಿದ್ದು, ಇದೀಗ ತೆಲುಗು ನಟ ರಾವ್​ ರಮೇಶ್​ ಪಾತ್ರದ ಅನಾವರಣವಾಗಿದೆ. CBI ಮುಖ್ಯಾಧಿಕಾರಿಯಾಗಿ ನಟ ರಾವ್​ ರಮೇಶ್​ ಕಾಣಿಸಿಕೊಳ್ತಿದ್ದು, ಕಣ್ಣೀಗಂಟಿ ರಾಘವನ್​ ಅನ್ನೋ ಹೆಸರಿನಿಂದ ಗುರುತಿಸಿಕೊಳ್ತಿದ್ದಾರೆ.

ನಟ ರಾವ್​ ರಮೇಶ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಇಂದೇ ಈ ಪಾತ್ರವನ್ನ ರಿವೀಲ್​ ಮಾಡಲಾಗಿದೆ. ಕೆಜಿಎಫ್​ ಚಾಪ್ಟರ್​ 2 ಟೀಸರ್​ನಲ್ಲಿ ರಾವ್​ ರಮೇಶ್​​​ ಪಾತ್ರದ ಸಣ್ಣ ಝಲಕ್​ ತೋರಿಸಲಾಗಿತ್ತಾದ್ರೂ, ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇದೀಗ ಈ ಸಿನಿಮಾದಲ್ಲಿ ಸಿಬಿಐ ಮುಖ್ಯಾಧಿಕಾರಿಯಾಗಿ ರಮೇಶ್​ ಕಾಣಿಸಿಕೊಳ್ತಿರೋದು ಕನ್ಫರ್ಮ್​​ ಆಗಿದೆ.

ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಕೆಜಿಎಫ್​ ಚಾಪ್ಟರ್​ 2 ಚಿತ್ರತಂಡ ವಿಭಿನ್ನ ರೀತಿಯಲ್ಲಿ ಸಿನಿಮಾದ ಕ್ಯಾರೆಕ್ಟರ್​​ ರಿವೀಲ್​ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದೆ. ಕೆಜಿಎಫ್​ ಮೊದಲ ಭಾಗದಲ್ಲಿ ಕಾಣಸಿಗದ ಸಿಬಿಐ, ಚಾಪ್ಟರ್​ 2ನಲ್ಲಿ ಏನು ಮಾಡಲು ಹೊರಟಿದ್ದಾರೆ ಅನ್ನೋ ಕುತೂಹಲವೂ ಕ್ರಿಯೇಟ್​ ಆಗಿದೆ.

ರಾವ್​ ಬರ್ತ್​ಡೇಗೆ ಪೋಸ್ಟ್​​ ಮಾಡಿರುವ ಫೋಟೋದ ಎರಡನೇ ಚಿತ್ರದಲ್ಲಿ, ಸಿಬಿಐ ಕೆಜಿಎಫ್​-2ನಲ್ಲಿ ಕಾಣಿಸಿಕೊಳ್ತಿರೋದು ಕೆಜಿಎಫ್​​ಗಾಗಿನಾ ಅಥವಾ ರಾಕಿಗಾಗಿನಾ? ಅನ್ನೋ ಪ್ರಶ್ನೆ ಎದ್ದಿದೆ. ಮತ್ತೊಂದು ಚಿತ್ರದಲ್ಲಿ ಸಿಬಿಐ ಅಧಿಕಾರಿ ರಾಘವನ್​ ನರಾಚಿ ಲೈಮ್​ಸ್ಟೋನ್​ ಕಾರ್ಪೊರೇಷನ್​​ ಹಿಂದಿರುವ ಸತ್ಯವನ್ನ ಬೇಧಿಸುವಲ್ಲಿ ಯಶಸ್ವಿಯಾಗ್ತಾರಾ? ಅಂತ ಬರೆದು ನಿರ್ದೇಶಕ ಪ್ರಶಾಂತ್​ ನೀಲ್​​ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿರೋದಂತೂ ಸತ್ಯ. ಇದಕ್ಕೇನಿದ್ರೂ ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಆಗುವವರೆಗೂ ಕಾಯಲೇಬೇಕು.

The post ಕ್ರೌರ್ಯ ಲೋಕದ ಕಂಟಕ ಕಣ್ಣೇಗಂಟಿ ರಾಘವನ್​​ಗೆ ಹುಟ್ಟು ಹಬ್ಬ; ಕೆಜಿಎಫ್​​ ನೆಲದಲ್ಲಿ ಮತ್ತೆಷ್ಟು ರಕ್ತದೌತಣ? appeared first on News First Kannada.

Source: newsfirstlive.com

Source link