ಮೇ 1 ನೇ ತಾರೀಖಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡೋಕೆ ಕೇಂದ್ರ ಸರ್ಕಾರವೇನೋ ನಿರ್ಧಾರ ಮಾಡಿದೆ. ಆದ್ರೆ, ವ್ಯಾಕ್ಸಿನ್ ಪಡೆಯೋಕೆ ಕೋವಿನ್ ವೆಬ್​ಸೈಟ್​ನಲ್ಲಿ ರೆಜಿಸ್ಟರ್ ಮಾಡಿಕೊಳ್ಳಲು ಹೋದವರಿಗೆ ಸಾಕಷ್ಟು ತೊಂದರೆಗಳಾಗ್ತಿರೋದು ಕಂಡು ಬಂದಿದೆ.

ಇಂದು ಸಂಜೆ 4 ಗಂಟೆಯಿಂದ ವ್ಯಾಕ್ಸಿನ್ ರೆಜಿಸ್ಟ್ರೇಷನ್​​​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದ್ರೆ ಕೋವಿನ್ ವೆಬ್​ಸೈಟ್ ಕ್ರ್ಯಾಶ್ ಆಗಿದ್ದು, ರೆಜಿಸ್ಟ್ರೇಷನ್​​ ಮಾಡಿಕೊಳ್ಳಲು ಹರ ಸಾಹಸ ಪಡುವಂತಾಗಿದೆ. ಒಮ್ಮೆಲೆ ಲಕ್ಷಾಂತರ ಜನರು ರೆಜಿಸ್ಟ್ರೇಷನ್ ಮಾಡಿಕೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಈ ರೀತಿಯಾಗಿರುವ ಸಾಧ್ಯತೆ ಇದ್ದು, ಜನ ಸಾಮಾನ್ಯರು ಮಾತ್ರ ಪರದಾಡುವಂತಾಗಿದೆ.

ಈಗಾಗಲೇ ದೇಶಾದ್ಯಂತ ಸುಮಾರು 15 ಕೋಟಿ ಜನರು ವ್ಯಾಕ್ಸಿನ್ ಅನ್ನು ಪಡೆದಿದ್ದಾರೆ. ಆದ್ರೆ ಮೇ 1ರಿಂದ 18 ವರ್ಷ ಮೇಲ್ಪಟ್ಟ ಜನ ಸಾಮಾನ್ಯರಿಗೂ ವ್ಯಾಕ್ಸಿನ್ ನೀಡಲು ಆರಂಭ ಮಾಡಲಾಗಿದೆ. ದೇಶದಲ್ಲಿ ಒಂದೇ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಾಗ್ತಿರೋದ್ರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದ್ದು, ವ್ಯಾಕ್ಸಿನ್ ಪಡೆಯಲು ಮುಗಿಬೀಳುತ್ತಿದ್ದಾರೆ.

ಇನ್ನು ಸಮಸ್ಯೆ ಏನೇ ಇದ್ದರೂ ಸ್ವಲ್ಪ ತಾಳ್ಮೆ ವಹಿಸಿ  https://www.cowin.gov.in/   ಈ ವೆಬ್​ಸೈಟ್​ಗೆ ಲಾಗಿನ್​ ಆಗಿ.. ವ್ಯಾಕ್ಸಿನ್ ಪಡೆಯಲು ರೆಜಿಸ್ಟರ್ ಮಾಡಿಕೊಳ್ಳಿ.

The post ಕ್ರ್ಯಾಶ್ ಆದ ಕೋ ವಿನ್ ಆ್ಯಪ್; ಹಿಂಗಾದ್ರೆ ವ್ಯಾಕ್ಸಿನ್ ಪಡೆಯೋಕೆ ರೆಜಿಸ್ಟರ್ ಮಾಡೋದು ಹೇಗೆ? appeared first on News First Kannada.

Source: newsfirstlive.com

Source link