ಲಖನೌ: ಕ್ಲಾಸ್ ರೂಮ್ನಲ್ಲಿ ಅವಿತುಕೊಂಡಿದ್ದ ಚಿರತೆಯೊಂದು, ವಿದ್ಯಾರ್ಥಿಯೋರ್ವನ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಯುಪಿಯ ಆಲಿಗಾರ್ಹ್ ಜಿಲ್ಲೆಯ ಚೌಧರಿ ನಿಹಾಳ್ ಸಿಂಗ್ ಇಂಟರ್ ಕಾಲೇಜಿನ ವಿದ್ಯಾರ್ಥಿ ರಾಜ್ಸಿಂಗ್, ತರಗತಿಗೆ ತೆರಳುತ್ತಿದ್ದಂತೆ ಚಿರತೆ ಕಂಡಿದ್ದು, ಆಚೆ ಬರುವಷ್ಟರಲ್ಲಿ ಆತನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಇನ್ನು ಚಿರತೆ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಲೆಯ ಆಡಳಿತ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸದ್ಯ, ಗಾಯಾಳು ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು, ಚಿರತೆ ಬಂದಿರುವ ವಿಷಯ ತಿಳಿದು ಶಾಲೆಯ ಹೊರಗೆ ಸಾಕಷ್ಟು ಜನರು ಜಮಾಯಿಸಿದ್ದರು.