ಬೆಂಗಳೂರು: ಕೊರೊನಾ ವ್ಯಾಕ್ಸಿನೇಷನ್​ ಬಗ್ಗೆ ಪ್ರಶ್ನಿಸಿ ಹೈಕೋರ್ಟ್​ಗೆ ಸಲ್ಲಿಸಿದ್ದ ಪಿಐಎಲ್ ವಜಾ ಮಾಡಿ ಹೈಕೋರ್ಟ್​ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

ಕ್ಲಿನಿಕಲ್ ಟ್ರಯಲ್ ಮುಗಿಸದೇ ವ್ಯಾಕ್ಸಿನೇಷನ್‌ ನೀಡಿದ್ದಾರೆ ಅನ್ನೋ ಆರೋಪವನ್ನ ಈ ಹಿಂದೆ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಹಾನಿಯಾಗಲಿದೆ ಅಂತ ಹೇಳಿ 18 ಕೋಟಿ ವ್ಯಾಕ್ಸಿನ್ ಹಾಕಿದ ಮೇಲೆ‌ ಹೈಕೋರ್ಟ್​ನಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್​ಗೆ ಅರ್ಜಿದಾರರು ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ವ್ಯಾಕ್ಸಿನೇಷನ್​ಗೆ ತಡೆ ನೀಡಲು ಮನವಿ ಮಾಡಿದ್ರು. ಹೀಗಾಗಿ ಕೋರ್ಟ್ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ ಅಂತ ಹೇಳಿ ಅರ್ಜಿದಾರರಿಗೆ 50 ಸಾವಿರ ದಂಡ ವಿಧಿಸಿ ಅರ್ಜಿಯನ್ನ ವಜಾ ಮಾಡಿದ್ದಾರೆ.

The post ‘ಕ್ಲಿನಿಕಲ್​ ಟ್ರಯಲ್​ ಮುಗಿಸದೇ ವ್ಯಾಕ್ಸಿನೇಷನ್’​ ಆರೋಪ: ಅರ್ಜಿ ವಜಾ ಮಾಡಿದ ಹೈಕೋರ್ಟ್ appeared first on News First Kannada.

Source: newsfirstlive.com

Source link