ಬೆಂಗಳೂರು: ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ತನ್ನ ಮಾರ್ಗಸೂಚಿಯನ್ನ ಪರಿಷ್ಕರಣೆ ಮಾಡಿದೆ. ಇಂದಿನಿಂದ ಎಲ್ಲಾ ರೀತಿಯ ಸಂತೆಗಳು, ವಾರದ ಸಂತೆ, ಎಪಿಎಂಸಿ ಮತ್ತು ದಿನಸಿ ಅಂಗಡಿಗಳನ್ನ ತೆರೆಯಲು ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

ಈ ಮೊದಲು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿತ್ತು. ಜನಸಂದಣಿ ತಡೆಯುವ ಉದ್ದೇಶದಿಂದ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಮಾರುಕಟ್ಟೆ ಬಂದ್ ಆದ್ರೂ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಾಪ್ ಕಾಮ್ಸ್ ತೆರೆಯಲು ಅನುಮತಿ ನೀಡಲಾಗಿದೆ. ತಳ್ಳುವ ಗಾಡಿಗಳ ಮೂಲಕ ಹಣ್ಣು, ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದ್ದು, ದುಬಾರಿ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

The post ಕ್ಲೋಸ್​ಡೌನ್​: ಇಂದಿನಿಂದ 12 ಗಂಟೆ ತನಕ ಓಪನ್​​ ಇರುತ್ತೆ ದಿನಸಿ ಅಂಗಡಿಗಳು appeared first on News First Kannada.

Source: newsfirstlive.com

Source link